ಮನೆಯಿಂದ ಹೊರ ಹೋದ ಯುವತಿ ನಾಪತ್ತೆ

ಹೊಸ ದಿಗಂತ ವರದಿ,ಮಂಡ್ಯ:

ಕಂಪ್ಯೂಟರ್ ಕಲಿಕೆಗೆಂದು ಮನೆಯಿಂದ ಹೊರ ಹೋದ ಯುವತಿ ನಾಪತ್ತೆಯಾಗಿರುವ ಘಟನೆ ನಾಗಮಂಗಲ ತಾಲೂಕಿನ ತಿರುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾರಾಯಣಗೌಡ ಎಂಬುವರ ಪುತ್ರಿ ರೋಹಿಣಿ (18) ಎಂಬಾಕೆಯೇ ನಾಪತ್ತೆಯಾದ ಯುವತಿ. ಕಳೆದ ಡಿ. 18ರಂದು ಕಂಪ್ಯೂಟರ್ ಕಲಿಕೆಗೆಂದು ಮನೆಯಿಂದ ಹೊರ ಹೋದ ರೋಹಿಣಿ ಈವರೆವಿಗೂ ವಾಪಸ್ಸು ಬಂದಿಲ್ಲ ಎಂದು ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಬಾಂಬೆಗೆ ಹೋಗುತಿತದ್ದೇನೆ ಎಂದು ಆಕೆಯ ಸ್ನೇಹಿತೆ ಶಿಲ್ಪಾಳಿಗೆ ಹುಬ್ಬಳ್ಳಿಯಿಂದ ದೂರವಾಣಿ ಕರೆ ಮಾಡಿ ತಿಳಿಸಿದ್ದಾಳೆನ್ನಲಾಗಿದೆ. ಕನ್ನಡ ಮತ್ತು ಹಿಂದಿ, ಇಂಗ್ಲೀಷ್ ಮಾತನಾಡುತ್ತಾರೆ. ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್, ಕೆಂಪು ಬಣ್ಣದ ಟೀ ಶರ್ಟ್ ಧರಿಸಿದ್ದಾಳೆ. ಸುಮಾರು 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ತೊಟ್ಟಿದ್ದಾಳೆ. ಈಕೆಯನ್ನು ಕಂಡವರು ತಕ್ಷಣ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಇಲ್ಲವೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!