ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಲವರ್ಸ್ ಗಳ ಮಧ್ಯ ಯಾವುದು ಒಂದು ಜಗಳಕ್ಕೆ ಬ್ರೇಕ್ ಅಪ್ ಆಗುವುದನ್ನು ನುಡಿರುತ್ತವೆ ಕೇಳಿರುತ್ತೇವೆ ಆದರೆ ಬೆಂಗಳೂರಿನಲ್ಲಿ ಸುಂದರಿಯೊಬ್ಬಳು ಬ್ರೇಕಪ್ ಗಾಗಿ ತನ್ನ ಪ್ರಿಯಕರಣ ಮೇಲೆ ತಾನೆ ರಾಬರಿ ಮಾಡಿಸಿ ಸಿಕ್ಕಿಬಿದ್ದಿದ್ದಾಳೆ.
ಇದೀಗ ಕಳ್ಳತನ ಮಾಡಿಸಿದ ಟೆಕ್ಕಿ ಶೃತಿ ಸೇರಿ ನಾಲ್ವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಹೌದು. ಲವ್ ಮಾಡೋಕೆ ಒಂದು ಕಾರಣವಿದ್ರೆ, ಬ್ರೇಕಪ್ ಮಾಡ್ಕೊಳ್ಳೋಕೆ ನೂರು ಕಾರಣ ಇರ್ತಾವೆ. ಅಂದಹಾಗೇ ಟೆಕ್ಕಿಯಾಗಿ ಕೆಲಸ ಮಾಡುವ ಯುವತಿ ಮತ್ತು ಯುವಕ ವಂಶಿಕೃಷ್ಣ ಅನ್ನೋರು ಕಳೆದ ಕೆಲ ವರ್ಷಗಳಿಂದ ಲವ್ ಮಾಡ್ತಿದ್ರು. ಎಲ್ಲವೂ ಚೆನ್ನಾಗಿಯೇ ಇತ್ತು, ಹೋದಕಡೆಯೆಲ್ಲಾ ಇಬ್ಬರೂ ಬೇರೆ ಬೇರೆ ಆ್ಯಂಗಲ್‌ಗಳಲ್ಲಿ ಸೆಲ್ಫಿಗೆ ಪೋಸ್ ಕೊಟ್ಟಿದ್ರು. ಹೀಗಿದ್ದ ಲವ್‌ಸ್ಟೋರಿಯಲ್ಲಿ ಯುವತಿ ಆ ಯುವಕನ ಹತ್ರ ಬ್ರೇಕಪ್ ಮಾಡಿಕೊಳ್ಳುವ ಪ್ಲ್ಯಾನ್ ಮಾಡಿದ್ಲು. ಈ ವಿಚಾರ ಯುವಕನಿಗೆ ತಿಳಿಸೋಕು ಮುನ್ನ ಮೊಬೈಲ್‌ನಲ್ಲಿರುವ ಫೋಟೋಗಳನ್ನ ಡಿಲೀಟ್ ಮಾಡಿಸೋದು ಹೇಗೆ ಅನ್ನೋ ಬಗ್ಗೆ ತಲೆಕೆಡಿಸಿಕೊಂಡಿದ್ದಳು. ಇದೇ ವೇಳೆ ಆಕೆಗೊಂದು ಖತಾರ್ನಾಕ್ ಪ್ಲ್ಯಾನ್ ಹೊಳೆದಿತ್ತು.
ಯುವತಿ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಮೊಬೈಲ್ ಕಸಿಯೋದು ಹೇಗೆ ಅನ್ನೋದು ಪ್ಲಾನ್ ಮಾಡಿದ್ಲು. ಅದರಂತೆ ಕಳೆದ ಇಪ್ಪತ್ತನೇ ತಾರೀಖಿನಂದು ಯುವತಿ ಮತ್ತು ಯುವಕ ವಂಶಿಕೃಷ್ಣ ಒಟ್ಟಿಗೆ ಇಲ್ಲಿನ ಬೋಗನಹಳ್ಳಿ ಕಡೆಗೆ ಬೈಕ್‌ನಲ್ಲಿ ಹೊರಟಿದ್ರು. ಇದೇ ವೇಳೆ ಎದುರಿಗೆ ಬಂದ ಕಾರು ಬೈಕ್‌ಗೆ ಡಿಕ್ಕಿಯಾಗಿತ್ತು. ಈ ವೇಳೆ ಕಾರಿನಿಂದ ಇಳಿದ ನಾಲ್ವರು ಯುವಕರು ಏಕಾಏಕಿ ಯುವಕ ವಂಶಿಕೃಷ್ಣ ಮೇಲೆ ಹಲ್ಲೆ ಮಾಡಿ ಕೈಯಲ್ಲಿದ್ದ 90 ಸಾವಿರ ಬೆಲೆಯ ಮೊಬೈಲ್ ಕಸಿದು ಎಸ್ಕೇಪ್ ಆಗಿದ್ರು.
ಈ ವೇಳೆ ಜೊತೆಗಿದ್ದ ಯುವತಿ ಮೊಬೈಲ್ ತಾನೇ ಹೋದ್ರೆ ಹೋಗಲಿ ಸುಮ್ನೆ ಬಾ ಅಂತಾ ಯುವಕನನ್ನು ಸಮಾಧಾನ ಮಾಡಿ ಅಲ್ಲಿಂದ ಕರ್ಕೊಂಡು ಹೋಗಿದ್ಲು. ಅಷ್ಟಕ್ಕೆ ಸುಮ್ಮನಾಗದ ಯುವಕ ವಂಶಿಕೃಷ್ಣ, ಬೆಳ್ಳಂದೂರು ಪೊಲೀಸರಿಗೆ ದೂರು ನೀಡಿದ್ದನು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರಿನ ನಂಬರ್ ಆಧರಿಸಿ ಸುರೇಶ್, ಮನೋಜ್, ವೆಂಕಟೇಶ್, ಹೊನ್ನಪ್ಪ ಎಂಬುವವರನ್ನು ಬಂಧಿಸಿ ವಿಚಾರಣೆ ಮಾಡಿದ ವೇಳೆ ಯುವತಿಯ ಕೈವಾಡ ಬೆಳಕಿಗೆ ಬಂದಿತ್ತು.
ಯುವಕನ ಮೊಬೈಲ್‌ನಲ್ಲಿದ್ದ ಕೆಲ ಫೋಟೋಗಳನ್ನು ಡಿಲೀಟ್ ಮಾಡಬೇಕಿತ್ತು, ಅದಕ್ಕೆ ಈ ಪ್ಲ್ಯಾನ್ ಮಾಡಿದ್ವಿ ಅಂತಾ ಯುವತಿ ಸೇರಿ ಐವರು ಪೊಲೀಸರ ಮುಂದೆ ತಪ್ಪೋಪ್ಪಿಕೊಂಡಿದ್ದಾರೆ. ಮತ್ತೊಂದು ಕಡೆ ದೂರು ನೀಡಿದ್ದ ಯುವಕ ವಂಶಿಕೃಷ್ಣ, ಪ್ರಿಯತಮೆಯ ಈ ಪ್ರಕರಣದ ಕಿಂಗ್ ಪಿನ್ ಅನ್ನೋದು ತಿಳಿದು ಶಾಕ್ ಆಗಿದ್ದಾನೆ.