ಭಾರತ-ಬಾಂಗ್ಲಾ ಮ್ಯಾಚ್ ನಲ್ಲಿ ಮಳೆಯದ್ದೇ ಆಟ: ಒಂದೂ ಎಸೆತ ಕಾಣದೇ 2ನೇ ದಿನದಾಟ ರದ್ದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯದ 2ನೇ ದಿನ ಮಳೆಯ ಆಟ ನಡೆದಿದ್ದು, ಇದರಿಂದ ಒಂದೂ ಎಸೆತ ಕಾಣದೇ ಪಂದ್ಯ ರದ್ದಾಗಿದೆ.

ಕಾನ್ಪುರದ ಗ್ರೀನ್ ಪಾರ್ಕ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಮಳೆಕಾಟದಿಂದ ರದ್ದಾಗಿದೆ.

ಶುಕ್ರವಾರ ರಾತ್ರಿಯಿಂದ ಶುರುವಾದ ಮಳೆಯು ಶನಿವಾರ ಮಧ್ಯಾಹ್ನದವರೆಗೂ ಮುಂದುವರೆದಿದ್ದು, ಮೈದಾನವು ಸಂಪೂರ್ಣ ತೇವಾಂಶದಿಂದ ಕೂಡಿದ್ದು, ಹೀಗಾಗಿ 2ನೇ ದಿನದಾಟವನ್ನು ರದ್ದುಗೊಳಿಸಲು ನಿರ್ಧರಿಸಲಾಯಿತು.

ಇದಕ್ಕೂ ಮುನ್ನ ಮೊದಲ ದಿನದಾಟ ಕೂಡ ಮಳೆಯ ಕಾರಣ ತಡವಾಗಿ ಶುರುವಾಗಿತ್ತು. ಈ ವೇಳೆ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡವು 35 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 107 ರನ್ ಕಲೆಹಾಕಿತು. ಈ ವೇಳೆ ಕಾರ್ಮೋಡ ಆವರಿಸಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.

ಇನ್ನುಳಿದಿರುವುದು ಕೇವಲ ಮೂರು ದಿನದಾಟಗಳು ಮಾತ್ರ. ಆದರೆ ಹವಾಮಾನ ಇಲಾಖೆಯ ವರದಿಯ ಪ್ರಕಾರ ಭಾನುವಾರ ಕೂಡ ಮಳೆ ಮುಂದವರೆಯಲಿದ್ದು, ಹೀಗಾಗಿ 3ನೇ ದಿನದಾಟ ಕೂಡ ಸಂಪೂರ್ಣವಾಗಿ ನಡೆಯುವುದು ಅನುಮಾನ ಎನ್ನಲಾಗಿದೆ.

 

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!