ಹುಬ್ಬಳ್ಳಿಯ ಸೊಸೈಟಿಯಲ್ಲಿ ನಡೆದ ಕಳವು ಪ್ರಕರಣ: ಪೊಲೀಸರ ಬಲೆಗೆ ಬಿದ್ದ ಆರೋಪಿ

ಹೊಸದಿಗಂತ ವರದಿ, ಹುಬ್ಬಳ್ಳಿ:

ಇತ್ತೀಚೆಗೆ ನಗರದ ಕೋಯಿನ್ ರಸ್ತೆಯ ಉಮಚಗಿ ಕಾಂಪ್ಲೆಕ್ಸ್ ನಲ್ಲಿರುವ ಮಹಾಂತಪ್ಪ ಅರ್ಬನ್ ಕೋ ಆಪರೇಟಿವ್ ಸೊಸೈಟಿಯ ಶೆಟರ್ಸ್ ಮುರಿದು ೨.೭೧ ಲಕ್ಷ ಹಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಆರೋಪಿ ಓರ್ವನನ್ನು ಶಹರ ಪೊಲೀಸರು ಬಂಧಿಸಿ ೧.೩೧ ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ಹಳಿಯಾಳದ ಮುಜಾಫಿರ್ ಮಹಮ್ಮದಶೇಖ ಬಂಧಿತ ಆರೋಪಿ. ಬ್ಯಾಂಕ್ ವ್ಯವಸ್ಥಾಪಕರ ಕ್ಯಾಬಿನ್ ಗಾಜು ಒಡೆದು, ಅಲ್ಲಿದ್ದ ಕೀಲಿಯಿಂದ ಕ್ಯಾಶ್ ಕೌಂಟರ್‌ನಲ್ಲಿನ ಲಾಕರ್ ತೆರದು ಹಣ ಲೂಟಿ ಮಾಡಿದ್ದ. ಅಷ್ಟೇ ಅಲ್ಲದೆ ತಾನು ಮಾಡಿದ ಕೃತ್ಯ ಪೊಲೀಸರಿಗೆ ತಿಳಿಯಬಾರದು ಎಂದು ಬ್ಯಾಂಕ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳ ಡಿವಿಆರ್ ಸಹ ದೋಚಿಕೊಂಡು ಹೋಗಿದ್ದ.

ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಶಹರ ಪೊಲೀಸ್ ಠಾಣಾಕಾರಿ ವಿಶ್ವನಾಥ ಜೌಗುಲೆ ಅವರ ನೇತೃತ್ವದ ತಂಡ ಆರೋಪಿಗೆ ಬಲೆ ಬಿಸಿತ್ತು. ಬ್ಯಾಂಕ್ ಅಕ್ಕಪಕ್ಕದ ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಕಳ್ಳನ ದೃಶಗಳು ಪತ್ತೆಯಾಗಿದ್ದವು. ನಂತರ ಆರೋಪಿ ಹಳಿಯಾಳದಲ್ಲಿರುವುದು ತಿಳಿದ ಪೊಲೀಸರು ಅಲ್ಲಿಗೆ ಹೋಗಿ ಬಂಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಹರ ಪೊಲೀಸ್ ಠಾಣೆಯ ಅಧಿಕಾರಿ ವಿಶ್ವನಾಥ ಚೌಗುಲೆ, ಪಿಎಸ್‌ಐ ವಿನೋದ, ಸಿಬ್ಬಂದಿ ಸಂಗಪ್ಪ ಕಟ್ಟಿಮನಿ, ರವಿರಾಜ ಕೆಂದೂರ, ಕಲ್ಲನಗೌಡ ಗುರುನಗೌಡ, ರುದ್ರಪ್ಪ ಹೊರಟ್ಟಿ ಅವರಿಗೆ ಡಿಸಿಪಿ ಕ್ರೈಂ ಹಾಗೂ ಸಂಚಾರ ಗೋಪಾಲ ಬ್ಯಾಕೋಡ, ಎಸಿಪಿ ಆರ್.ಕೆ. ಪಾಟೀಲ ಅಭಿನಂದಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!