HOLI 2024 | ಬಣ್ಣ ಹಚ್ಚುವ ನೆಪದಲ್ಲಿ ‘ಅಡ್ವಾಂಟೇಜ್‌’ ತೆಗೆದುಕೊಳ್ಳೋ ಹುಡುಗರೂ ಇದ್ದಾರೆ, Girls ಎಚ್ಚರ!

ಹೋಳಿ ಹಬ್ಬ ಎಷ್ಟು ಚಂದವೋ ಅಷ್ಟೇ ಅನ್‌ಸೇಫ್‌ ಕೂಡ. ಉತ್ತರಪ್ರದೇಶದಲ್ಲಿ ಹೋಳಿ ಆಚರಣೆ ನೆಪದಲ್ಲಿ ಮುಸ್ಲಿಂ ಮಹಿಳೆಗೆ ಕೆಲ ಗಂಡಸರು ಲೈಂಗಿಕ ಕಿರುಕುಳ ನೀಡಿದ್ದಾರೆ. ಬಣ್ಣ ಹಚ್ಚುವ ನೆಪದಲ್ಲಿ ಖಾಸಗಿ ಅಂಗಗಳನ್ನು ಮುಟ್ಟುವ ಕಾಮುಕರೂ ಇದ್ದಾರೆ. ಹಾಗಾಗಿ ಹುಡುಗೀರೇ, ಹುಷಾರಾಗಿರೋಕೆ ಈ ಟಿಪ್ಸ್‌ ಪಾಲಿಸಿ..

ಹೋಳಿ ಆಡೋಕೆ ರ್ಯಾಂಡಮ್‌ ಜಾಗಗಳಿಗೆ ಹೋಗ್ಬೇಡಿ. ನಿಮ್ಮ ಹುಡುಗಿಯರ ಗ್ಯಾಂಗ್‌ ಜೊತೆ ಅಥವಾ ನಿಮಗೆ ಸೇಫ್‌ ಎನಿಸುವ ಹುಡುಗರು,ಕಸಿನ್ಸ್‌ ಜೊತೆ ಪ್ಲಾನ್‌ ಮಾಡಿ.

ಮನೆಯಲ್ಲಿ ಯಾವ ಜಾಗದಲ್ಲಿ ಹೋಳಿ ಆಡೋದಕ್ಕೆ ಹೋಗ್ತಿದ್ದೀರಾ? ನಿಮ್ಮ ಜೊತೆಯಲ್ಲಿ ಯಾರೆಲ್ಲಾ ಇದ್ದಾರೆ ಹೇಳಿಬನ್ನಿ.

ನಿಮ್ಮ ಲೊಕೇಶನ್‌ ಆನ್‌ ಮಾಡಿ ಪೋಷಕರೊಂದಿಗೆ ಶೇರ್‌ ಮಾಡಿರಿ, ನೀವು ಮನೆಗೆ ಬರುವವರೆಗೂ ಅದು ಹಾಗೇ ಇರಲಿ.

ಓವರ್‌ ಕ್ರೌಡ್‌ ಇರುವ ಜಾಗಗಳಿಗೆ ಹೋಗಲೇಬೇಡಿ, ನಿಮ್ಮ ಗುಂಪಿನ ಜೊತೆ ಇದ್ದರೂ ಬೇರೆಯವರು ಬರುತ್ತಾರೆ.

ಸ್ಪೋರ್ಟ್ಸ್‌ ಬ್ರಾ ಬಳಕೆ ಮಾಡಿ, ಹಳೇ ಡಾರ್ಕ್‌ ಬಣ್ಣದ ಬಟ್ಟೆಯನ್ನು ಹಾಕಿಕೊಳ್ಳಿ. ಸಾಧ್ಯವಾದಷ್ಟು ಕ್ರೌಡೆಡ್‌ ಜಾಗಗಳಲ್ಲಿ ಖಾಸಗಿ ಅಂಗಗಳನ್ನು ಕೈಯಿಂದ ಕವರ್‌ ಮಾಡಿಕೊಂಡು ಓಡಾಡಿ.

ಹೆಲ್ಪ್‌ಲೈನ್‌ ಸಂಖ್ಯೆಗಳ ಬಗ್ಗೆ ಮಾಹಿತಿ ಇರಲಿ.

ಯಾರೋ ನಂಬಿಕೆ ಇಲ್ಲದವರು ಕೊಟ್ಟ ಪಾನೀಯಗಳ ಸೇವನೆ ಮಾಡಬೇಡಿ.

ಯಾರಾದ್ರೂ ಬಣ್ಣ ಹಚ್ಚಲು ಬಂದರೆ ನೋ ಎಂದು ಹೇಳೋದಕ್ಕೆ ಹೆಸಿಟೇಟ್‌ ಮಾಡಬೇಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!