ಮತಗಟ್ಟೆಯಲ್ಲಿ ಜನರೇ ಇಲ್ಲ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾನ ಬಹಿಷ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಬೆಳಗ್ಗೆಯಿಂದಲೇ ಮತದಾನ ಆರಂಭವಾಗಿದ್ದು, ಬೆಳಗ್ಗೆ ಜನರು ಕಡಿಮೆ ಬರಬಹುದು ಎನ್ನುವ ಲೆಕ್ಕಾಚಾರದಲ್ಲಿ ಸಾಕಷ್ಟು ಮಂದಿ ಬೆಳಗ್ಗೆಯೇ ಬಂದು ವೋಟ್ ಮಾಡಿದ್ದಾರೆ.

ಆದರೆ ಈ ಕ್ಷೇತ್ರದಲ್ಲಿ ಮತಗಟ್ಟೆಯೇನೋ ಇದೆ, ಆದರೆ ಜನರೇ ಇಲ್ಲದೆ ಬಣಗುಡುತ್ತಿದೆ. ಹೌದು, ಚಾಮುಂಡೇಶ್ವರಿ ಕ್ಷೇತ್ರದ ಏಳಿಗೆಹುಂಡಿ ಗ್ರಾಮದ ಗ್ರಾಮಸ್ಥರು ಮತದಾನ ಮಾಡುವುದಿಲ್ಲ ಎಂದು ಬಹಿಷ್ಕರಿಸಿದ್ದಾರೆ.

ಅಧಿಕಾರಿಗಳು ಎಲ್ಲರ ಮನವೊಲಿಸಲು ಯತ್ನಿಸುತ್ತಿದ್ದು, ಯಾವೊಬ್ಬ ವ್ಯಕ್ತಿಯೂ ಮತಗಟ್ಟೆ ಬಳಿ ಕಾಣಿಸಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!