ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಸಕ ಮುನಿರತ್ನ ವಿರುದ್ಧ ಇನ್ನೂ ಎರಡು ಆಡಿಯೋಗಳಿವೆ. ನಾಳೆ ಬಿಡುಗಡೆ ಮಾಡುತ್ತೇನೆ ಎಂದು ಗುತ್ತಿಗೆದಾರ ಚಲುವರಾಜು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ, ಮಾತನಾಡಿದ ಚಲುವರಾಜು, ಮುನಿರತ್ನ ಅವರ ಇನ್ನೂ ಎರಡು ಆಡಿಯೋ ನಾಳೆ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ.
ಶಾಸಕ ಮುನಿರತ್ನ ಕಳೆದ ಮೂರು ವರ್ಷಗಳಿಂದ ತನಗೆ ಕೊಡಬಾರದ ಹಿಂಸೆ ಕೊಟ್ಟಿದ್ದಾರೆ. ಮುನಿರತ್ನ ಕಡೆಯವರು ರೇಣುಕಾಸ್ವಾಮಿಗೆ ಆದ ಗತಿಯೇ ನಿನಗೂ ಆಗುತ್ತೆ ಎಂದು ಹೆದರಿಸಿದ್ದಾರೆ. ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು ರಕ್ಷಣೆ ನೀಡುವಂತೆ ಚಲುವರಾಜು ಹೇಳಿದ್ದಾರೆ.