July 15, 2026
Wednesday, July 15, 2026
spot_img

ಊರಿನಲ್ಲಿ ಸ್ಮಶಾನವೇ ಇಲ್ಲ! ಬಸ್‌ಸ್ಟಾಂಡ್‌ನಲ್ಲಿಯೇ ಕಟ್ಟಿಗೆ ಇಟ್ಟು ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ!

ಹೊಸದಿಗಂತ ವರದಿ ಗದಗ:

ಗ್ರಾಮಕ್ಕೆ ಸ್ಮಶಾನ ಇಲ್ಲದಕ್ಕೆ ಗ್ರಾಮದ ಮಧ್ಯಭಾಗದ ಬಸ್ ನಿಲ್ದಾಣ ಬಳಿ ಕಟ್ಟಿಗೆ ಇಟ್ಟು ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಿರುವ ಘಟನೆ ಗದಗ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

ಹೊಸೂರು ಗ್ರಾಮದಲ್ಲಿ ಇಂದು 51 ವರ್ಷದ ಬಸವಣ್ಣೆಮ್ಮ ಬೋಳಣ್ಣವರ್ ಎಂಬ ಮಹಿಳೆ ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ. ಅವರ ಅಂತ್ಯಕ್ರಿಯೆಗೆ ಜಾಗೆ ಇಲ್ಲದಕ್ಕೆ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು. ಈ ಊರಲ್ಲಿ ಯಾವುದೇ ಜನಾಂಗದವರು ಮೃತಪಟ್ಟರು ಅನೇಕ ದಶಕಗಳಿಂದ ಗ್ರಾಮದ ಬಶೆಟ್ಟಿ ಎಂಬುವರ ಜಮೀನಲ್ಲಿ ಸಂಸ್ಕಾರ ಮಾಡುತ್ತಿದ್ದರು. ಆದ್ರೆ ಇಂದು ಬಶೆಟ್ಟಿ ಕುಟುಂಬಸ್ಥರು ಬಸವಣ್ಣೆಮ್ಮಳ ಅಂತಿಮ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇದರಿಂದ ಆಕ್ರೋಶಗೊಂಡ ಸ್ಥಳಿಯರು ಗ್ರಾಮದ ಮಧ್ಯಭಾಗದಲ್ಲೇ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ. ಬಸ್ ನಿಲ್ದಾಣ ಎದುರು ಕಟ್ಟಿಗೆ ಇಟ್ಟು ಅಂತ್ಯಕ್ರಿಯೆಗೆ ಮುಂದಾದರು. ಕೂಡಲೆ ಮಾಹಿತಿ ತಿಳಿದು ಸ್ಥಳಕ್ಕೆ ಎಸಿ ಗಂಗಪ್ಪ, ರಹಶೀಲ್ದಾರ್ ಶ್ರೀನಿವಾಸಮೂರ್ತಿ ಭೇಟಿ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಗ್ರಾಮಸ್ಥರ ಮನವೊಲಿಸಲು ಪೊಲೀಸ್ ಸಿಬ್ಬಂದಿ ಮುಂದಾದರು. ಹೊಸೂರು ಗ್ರಾಮಕ್ಕೆ ಸ್ಮಶಾನ ಶಾಶ್ವತ ಪರಿಹಾರ ಸಿಗದಿದ್ದಲ್ಲಿ ಗ್ರಾಮದ ಮಧ್ಯವೇ ಸಂಸ್ಕಾರ ಎಂದ ಪಟ್ಟು ಹಿಡಿದರು. ನಂತರ ಅಧಿಕಾರಿಗಳು ಸ್ಥಳಿಯರನ್ನು ಹಾಗೂ ಜಮೀನು ಮಾಲೀಕರನ್ನು ಮನವೊಲಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !