ಹೆಣ್ಣು ಕುಲಕ್ಕೆ ನೋವು ಕೊಟ್ಟರೆ ಉದ್ಧಾರ ಆದ ಇತಿಹಾಸವಿಲ್ಲ: ಅಶ್ವಿನಿ ಬೆಂಬಲಕ್ಕೆ ನಿಂತ ಜಗ್ಗೇಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಅನೇಕ ನಟ ನಟಿಯರು ನಿಂದಿಸಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೀಗ ನವರಸನಾಯಕ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಹೆಣ್ಣುಕುಲ್ಲಕ್ಕೆ ಅಗೌರವ ತೋರಿಸಿದರೆ ಉದ್ಧಾರ ಆಗ್ತಾರಾ ಎಂದು ಹಿಡಿಶಾಪ ಹಾಕಿದ್ದಾರೆ.

ಪುನೀತನ ಮಡದಿ ಅಣಕಿಸಿದ ನತದೃಷ್ಟರೆ ನಿಮಗೂ ತಾಯಿ ಇರಬೇಕು. ತಾಯಿ ಬೆಲೆ ಗೊತ್ತಿರಬೇಕು. ಒಂದು ವೇಳೆ, ತಾಯಿ ಮತ್ತು ಹೆಣ್ಣಿಗೆ ಗೌರವ ಕೊಡಲ್ಲ ಎಂದರೆ ಖಂಡಿತಾ ಅಂಥವರು ಮನುಕುಲಕ್ಕೆ ಅನರ್ಹ. ಪುನೀತನ ಮಡದಿ ಅನಾಥಳಲ್ಲ ತನ್ನ ಪ್ರೀತಿಸುತ್ತಿದ್ದ ಕೋಟ್ಯಾಂತರ ಅಭಿಮಾನಿಗಳ ಬಳುವಳಿ ಕೊಟ್ಟು ಹೋಗಿದ್ದಾನೆ ಎಂದು ಜಗ್ಗೇಶ್ ಅಪ್ಪು ಅಭಿಮಾನಿಗಳ ಕಡೆ ತೋರಿಸಿದ್ದಾರೆ. ಹೆಣ್ಣು ಕುಲಕ್ಕೆ ನೋವು ಕೊಟ್ಟವ ಉದ್ಧಾರ ಆದ ಇತಿಹಾಸವಿಲ್ಲ ಎಂದು ಜಗ್ಗೇಶ್ ಅಶ್ವಿನಿ ಪರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಗ್ಗೆ ಬರೆದ ಕೀಳು ಮಟ್ಟದ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!