ಬಿಜೆಪಿಯಲ್ಲಿ ನಾಯಕನೇ ಇಲ್ಲ, ವಿಪಕ್ಷ ನಾಯಕ ಎಲ್ಲಿಂದ ಬರ‍್ತಾನೆ?: ಕಾಂಗ್ರೆಸ್ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾದ್ರು ಸಿಎಂ ಯಾರು ಅನ್ನೋ ವಿಷಯ ಚರ್ಚೆಯಲ್ಲಿತ್ತು. ಸಿಎಂ ಯಾರು ಎಂದು ತಿಳಿದ ಮೇಲೆ ಸಚಿವರ‍್ಯಾರು ಅನ್ನೋ ಮಾಹಿತಿ ಹೊರಬೀಳೋಕೆ ಇನ್ನಷ್ಟು ಸಮಯ ಬೇಕಾಯ್ತು. ವಿಪಕ್ಷವಾದ ಬಿಜೆಪಿ ಈ ವಿಷಯದ ಬಗ್ಗೆ ಸಾಕಷ್ಟು ಟೀಕೆ ಮಾಡಿತ್ತು.

ಇದೀಗ ಟೀಕೆ ಮಾಡೋ ಸಮಯ ಕಾಂಗ್ರೆಸ್‌ಗೆ ಬಂದಿದ್ದು, ಬಿಜೆಪಿಯಲ್ಲಿ ವಿಪಕ್ಷ ನಾಯಕ ಯಾರು ಎನ್ನೋದೇ ಇನ್ನೂ ತಿಳಿದಿಲ್ಲ ಎಂದು ಟೀಕೆ ಮಾಡಿದೆ.

ಬಿಜೆಪಿಯಲ್ಲಿ ಸೋತು ಸುಣ್ಣವಾದವರು,ರಿಟೈರ್ ಆದವರು, ಮನೆಯಲ್ಲಿ ಕೂತವ್ರು, ಕೆಲಸಕ್ಕೆ ಬಾರದವರೇ ನಮ್ಮ ಸರ್ಕಾರದ ಬಗ್ಗೆ ಬಾಯಿಗೆ ಬಂದಂತೆ ಮಾತಾಡ್ತಿದ್ದಾರೆ. ಇಷ್ಟು ಜನರಿರೋ ಬಿಜೆಪಿಯಲ್ಲಿ ಒಬ್ಬನೇ ಒಬ್ಬ ನಾಯಕ ಇಲ್ವಾ? ನಾಯಕರೇ ಇಲ್ಲದ ಬಿಜೆಪಿಗೆ ವಿರೋಧ ಪಕ್ಷದ ನಾಯಕ ಸಿಗೋದಾದ್ರೂ ಎಲ್ಲಿಂದ ಎಂದು ಪ್ರಶ್ನಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!