ಅತಂತ್ರ ಪ್ರಶ್ನೆಯೇ ಇಲ್ಲ, ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತೆ: ಬಿ.ಸಿ. ಪಾಟೀಲ್‌

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದ್ದು, ಇತ್ತ ಎಕ್ಸಿಟ್‌ ಪೋಲ್‌ ಸಮೀಕ್ಷೆ ಸುಳ್ಳು, ಈ ಬಾರೀ ಅತಂತ್ರ ಫಲಿತಾಂಶ ಪ್ರಕಟವಾಗಲ್ಲ. ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತದೆ ಬರೆದು ಇಟ್ಟುಕೊಳ್ಳಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಹೇಳಿದ್ದಾರೆ.

ಈ ಬಗ್ಗೆ ಹಾವೇರಿಯಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ರೇಸಾರ್ಟ್‌ ರಾಜಕೀಯದ ಬಗ್ಗೆ ಮಾತನಾಡುತ್ತಿರುವದು ಹಾಸ್ಯಾಸ್ಪದ. ಕಾಂಗ್ರೆಸ್‌ ನಲ್ಲಿ ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೋಲಿಸಿದರು ಎನ್ನುವಂತೆ ಅವರು ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನಡೆಸುತ್ತಿದ್ದಾರೆ. ಈ ಬಾರೀ ರಾಜ್ಯದ ಜನ ನಮ್ಮ ಕೈ ಬಿಡಲ್ಲ, ನಮಗೆ ಬಹುಮತ ಬರಲಿದೆ. ನನಗೆ ವಿಶ್ವಾಸವಿದೆ ನನ್ನ ಅಭಿವೃದ್ದಿ ಕಾರ್ಯಗಳು ನನ್ನ ಕೈ ಹಿಡಿಯುತ್ತವೆ, ಜನರು ನನಗೆ ಆಶೀರ್ವಾದ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೇಸಾರ್ಟ್ ರಾಜಕೀಯದ ಕುರಿತು ಮಾತನಾಡಿದ ಅವರು, ದಾಂಡೇಲಿಯಲ್ಲಿ ಮಾತ್ರ ರೇಸಾರ್ಟ್ ಇದೆಯಾ. ಈ ಬಾರಿನಲ್ಲಿ ಬಸ್‌ನಲ್ಲಿ ಹೋಗುತ್ತಾರೆ ಎಂಬ ಕೀಳು ಆರೋಪ ಯಾಕೆ ಹೋಗುವುದಾದರೇ ಕಾರ್‌ನಲ್ಲಿ ವಿಮಾನದಲ್ಲಿ ಹೋಗುತ್ತಾರೆ. ಅಷ್ಟಕ್ಕೂ ಅಂತಹ ಪ್ರಶ್ನೆಗೆ ಉದ್ಭವವಾಗುವುದಿಲ್ಲ ಎಂದು ಹೇಳಿದರು.

ಕುಮಾರಸ್ವಾಮಿ ಮನೆಗೆ ಹೋಗುವ ಪ್ರಸಂಗ ಬರುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾದು ನೋಡಿ ಗೊತ್ತಾಗುತ್ತೆ, ಈ ಬಾರಿ ಜಯ ನನ್ನದೇ ಎಂದು ನಮಗೆ ನಂಬಿಕೆ ಇದೆ. ಎಕ್ಸಿಟ್ ಪೋಲ್ ನಿರ್ಧಾರ ಮಾಡುವವರು ಎಕ್ಸಿಟ್ ಪೋಲ್ ಮಾಡಿದವರಲ್ಲ. ಅದನ್ನು ಮಾಡುವವರು ಮತದಾರರು ಅಂತಿಮ ನಿರ್ಧಾರ ಎಂದು ಬಿ.ಸಿ.ಪಾಟೀಲ್ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!