ಅಮರನಾಥ ಯಾತ್ರೆಗಾಗಿ 2,500 ಮೊಬೈಲ್ ಶೌಚಾಲಯಗಳ ವ್ಯವಸ್ಥೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜುಲೈ 1ರಿಂದ ಆರಂಭಗೊಂಡು ಆಗಸ್ಟ್​ 31 ರಂದು ಮುಕ್ತಾಯಗೊಳ್ಳಲಿರುವ ಅಮರನಾಥ ಯಾತ್ರೆಗೆ ಸಕಲ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ.

ಅಮರನಾಥ ಯಾತ್ರೆಗಾಗಿ ಬರುವ ಯಾತ್ರಾರ್ಥಿಗಳ ಅನುಕೂಲಕ್ಕೆ 2,500 ಕ್ಕೂ ಹೆಚ್ಚು ಮೊಬೈಲ್ ಶೌಚಾಲಯಗಳ ಸ್ಥಾಪಿಸಲಾಗುವುದು ಮತ್ತು ಹಿಮಾಲಯದಲ್ಲಿ 3,880 ಮೀಟರ್ ಎತ್ತರದಲ್ಲಿರುವ ಗುಹಾ ದೇಗುಲವನ್ನು ತಲುಪಲು ಇವರು ಎರಡು ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 1 ರಂದು ಪ್ರಾರಂಭವಾಗಲಿರುವ 62 ದಿನಗಳ ಯಾತ್ರೆಗೆ ಈ ಬಾರಿ ಹೆಚ್ಚಿಸ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಆಗಮಿಸಲಿದ್ದಾರೆ. ಒಟ್ಟು 1,500 ಸಿಬ್ಬಂದಿ ಕಥುವಾ ಜಿಲ್ಲೆಯ ಲಖನ್‌ಪುರದಿಂದ ದೇಗುಲದ ವರೆಗಿನ ಶೌಚಾಲಯಗಳ ನಿರ್ವಹಿಸಲಿದ್ದಾರೆ. ಬಾಲ್ಟಾಲ್ ಅಕ್ಷದಲ್ಲಿ 940 ಕ್ಕೂ ಹೆಚ್ಚು ಶೌಚಾಲಯಗಳನ್ನು ಮತ್ತು ಪಹ್ಲಾಗಮ್ ಅಕ್ಷದಲ್ಲಿ 1,345 ಶೌಚಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೌಚಾಲಯಗಳ ನಿರ್ವಹಣೆಗಾಗಿ 1,370 ಸಿಬ್ಬಂದಿ ನಿಯೋಜನೆ
ಈ ಶೌಚಾಲಯಗಳ ನಿರ್ವಹಣೆಗಾಗಿ ನೈರ್ಮಲ್ಯ ಕಾರ್ಯಕರ್ತರು ಮತ್ತು ಮೇಲ್ವಿಚಾರಕರು ಸೇರಿದಂತೆ 1,370 ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಮತ್ತು ಯಾತ್ರಿ ನಿವಾಸದಲ್ಲಿ ಮತ್ತು ಜಮ್ಮು ನಗರದ ಇತರ ಸ್ಥಳಗಳಲ್ಲಿ ಹೆಚ್ಚುವರಿಯಾಗಿ 120 ಶೌಚಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!