ಹೊಸದಿಗಂತ ವರದಿ, ಹಾವೇರಿ:
ಅತಿವೃಷ್ಠಿಯಿಂದ ಹಾನಿಯಾದ ಮನೆಗಳಿಗೆ ಪರಿಹಾರ ನೀಡುವಲ್ಲಿ ಅಲ್ಲೊಂದು ಇಲ್ಲೊಂದು ತಪ್ಪಾಗಿರಬಹುದು, ಆದರೆ ಎಲ್ಲಾ ಕಡೆ ತಪ್ಪಾಗಿಲ್ಲ. ಅಂತಹುದು ಕಂಡುಬಂದರೆ ಸೂಕ್ತ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಹೇಳಿದರು.
ಜಿಲ್ಲೆಯ ಶಿಗ್ಗಾವ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಶುಕ್ರವಾರ ವಸತಿ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ವಸತಿ ಯೋಜನೆಗಳ ಕಾಮಗಾರಿಗಳ ಪರಿವೀಕ್ಷಣೆ ಮಾಡಿದ ನಂತರ ಸುದ್ದಿಗಾರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೆಲ ಗ್ರಾ.ಪಂಗಳಲ್ಲಿ ಫಲಾನುಭವಿಗಳ ಅರ್ಜಿಗಳಿಲ್ಲದೆ, ಪಿಡಿಓ, ಗ್ರಾಮ ಸಹಾಯಕ ಹಾಗೂ ಇಂಜನೀಯರುಗಳ ಪರಿಶೀಲನಾ ವರದಿ ಇಲ್ಲದೆ ಮನೆ ಬೀಳದಿರುವವರಿಗೆ ಮನೆಗಳನ್ನು ನೀಡಲಾಗಿದೆ ಹಾಗೂ ಕೆಲ ಪಿಡಿಓಗಳು ನಮ್ಮ ಗಮನಕ್ಕೆ ಬಾರದನೆ ಮನೆ ಹಂಚಿಕೆ ಮಾಡಲಾಗಿದೆ ತನಿಖೆ ಮಾಡುವಂತೆ ತಹಶೀಲ್ದಾರ ಅವರಿಗೆ ಪತ್ರ ಬರೆದಿರುವರು ಎಂದು ಸಚಿವರ ಗಮನಕ್ಕೆ ತಂದ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರು ಈ ಕುರಿತು ನನ್ನ ಗಮನಕ್ಕೆ ಬಂದಿದ್ದು ತನಿಖೆ ಮಾಡುವಂತೆ ಉಪವಿಭಾಗಾಧಿಕಾರಿಗಳಿಗೆ ತಿಳಿಸಿಲಾಗಿದೆ ಎಂದಾಗ. ಈ ಕುರಿತು ತನಿಖೆ ಮಾಡಿ ನಾಲ್ಕು ದಿನಗಳ ಒಳಗಾಗಿ ನನಗೆ ಮಾಹಿತಿ ನೀಡುವಂತೆ ಸಚಿವ ವಿ.ಸೋಮಣ್ಣ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಹಣ ನೀಡಿದವರಿಗೆ ಮಾತ್ರ ಮನೆ ಹಂಚಿಕೆ ಮಾಡಲಾಗಿದೆ ಎಂದು ರಾಜ್ಯದಲ್ಲಿ ಇದೇ ಮೊದಲು ನನ್ನ ಗಮನಕ್ಕೆ ಬಂದಿರುವುದು. ಹಾಗೊಂದು ವೇಳೆ ಅಂತಹ ಘಟನೆಗಳು ಜರುಗಿದ್ದರೆ ನನಗೆ ಮಾಹಿತಿ ನೀಡಿ ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸುವುದಲ್ಲದೆ. ೨-೩ ದಿನಗಳಲ್ಲಿ ಇಂತಹ ತಪ್ಪಿಗಳನ್ನು ಸರಿ ಪಡಿಸುವದಾಗಿ ತಿಳಿಸಿದರು.
ರಾಜ್ಯದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ೧.೮ ಲಕ್ಷ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ. ಫೆಬ್ರುವರಿ ತಿಂಗಳಲ್ಲಿ ೮೦ ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ವಿತರಣೆ ಮಾಡಲಾಗುತ್ತದೆ. ವಸತಿ ಯೋಜನೆಗಳಲ್ಲಿ ಮನೆ ಪಡೆಯಲು ಈ ಹಿಂದೆ ಇದ್ದ ಅನೇಕ ನಿಯಮಗಳನ್ನು ಬದಲಾವಣೆ ಮಾಡಲಾಗಿದ್ದು, ಬಿಪಿಎಲ್ ಪಡಿತರ ಚೀಟಿ ಹೊಂದಿದ ಎಲ್ಲರೂ ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿ.ಪಂ ಸಿಇಓ ಮಹಮ್ಮದ ರೋಷನ್, ಇಂಜೀಯರ ಶ್ರೀನಿವಾಸ, ಮಹಾಮತೆಶ, ಹೆಬಿಟೆಟ್ ಸಂಸ್ಥೆಯ ಅಧಿಕಾರಿಗಳಿದ್ದರು.