ಏನೋ ಸಮಸ್ಯೆ ಇರಬಹುದು ಅದಕ್ಕೆ ‘ದಿ ಕಾಶ್ಮೀರ್​ ಫೈಲ್ಸ್​’ ನಾಮಿನೇಟ್ ಆಗಿಲ್ಲ ಅನಿಸುತ್ತೆ: ನಟ ಅನುಪಮ್​ ಖೇರ್​

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

95ನೇ ಆಸ್ಕರ್​ ಪ್ರಶಸ್ತಿಯ (Oscar Awards) ನಾಮಿನೇಷನ್​ ಪಟ್ಟಿ ಪ್ರಕಟವಾಗಿದ್ದು,‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು ನಾಮಿನೇಟ್​ ಆಗಿತ್ತು.

ಆದ್ರೆ ಈ ರೆಸ್ ನಲ್ಲಿ ಭಾರತದ 300ಕ್ಕೂ ಅಧಿಕ ಸಿನಿಮಾಗಳು ನಾಮನಿರ್ದೇಶನ ಹಂತದಲ್ಲಿದ್ದವು. ಆ ಪೈಕಿ ಒಂದಷ್ಟು ಸಿನಿಮಾಗಳಿಗೆ ಮಾತ್ರ ನಾಮಿನೇಟ್​​ ಆಗುವ ಅವಕಾಶ ಸಿಕ್ಕಿದೆ.
ಕನ್ನಡದ ‘ಕಾಂತಾರ’, ‘ವಿಕ್ರಾಂತ್​ ರೋಣ’, ಹಿಂದಿಯ ‘ದಿ ಕಾಶ್ಮೀರ್​ ಫೈಲ್ಸ್​’ (The Kashmir Files) ಸಿನಿಮಾಗಳು ರೇಸ್​ನಿಂದ ಹೊರಗುಳಿದಿವೆ. ಇದರಿಂದ ಅಭಿಮಾನಿಗಳಿಗೆ ಬೇಸರ ಆಗಿದೆ.

ಈ ಕುರಿತು ಮಾತನಾಡಿದ ಬಾಲಿವುಡ್ ನಟ ಅನುಪಮ್​ ಖೇರ್​ (Anupam Kher), ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರಕ್ಕೆ ಆಸ್ಕರ್​ ಸಿಗಬೇಕು ಎಂಬುದು ಹಲವರ ಆಸೆ ಆಗಿತ್ತು. ಆದರೆ ಅದು ಸಾಧ್ಯವಾಗಿಲ್ಲ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್​ ಪ್ರಶಸ್ತಿಗೆ ನಾಮಿನೇಟ್​ ಆಗಿದೆ. ಆ ಬಗ್ಗೆ ಅನುಪಮ್​ ಖೇರ್​ ಅವರಿಗೆ ಖುಷಿ ಇದೆ. ‘ಆರ್​ಆರ್​ಆರ್​ ಚಿತ್ರಕ್ಕೆ ಕ್ರಿಟಿಕ್ಸ್​ ಚಾಯ್ಸ್​ ಮತ್ತು ಗೋಲ್ಡನ್​ ಗ್ಲೋಬ್​ ಪ್ರಶಸ್ತಿ ಬಂದಿದೆ. ಭಾರತೀಯ ಚಿತ್ರರಂಗಕ್ಕೆ ಇದು ಹೆಮ್ಮೆಯ ವಿಚಾರ. ಅದನ್ನು ನಾವೇಕೆ ಸೆಲೆಬ್ರೇಟ್​ ಮಾಡಬಾರದು? ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾದಲ್ಲಿ ಖಂಡಿತವಾಗಿ ಏನೋ ಸಮಸ್ಯೆ ಇರಬಹುದು’ ಎಂದು ಅನುಪಮ್​ ಖೇರ್​ ಹೇಳಿದ್ದಾರೆ.

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಕಡಿಮೆ ಬಜೆಟ್​ನಲ್ಲಿ ತಯಾರಾಗಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಹಲವು ಆಯಾಮದಿಂದ ಈ ಸಿನಿಮಾ ಚರ್ಚೆಗೆ ಒಳಗಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಘಟನೆಗಳನ್ನು ಆಧರಿಸಿ ಈ ಚಿತ್ರ ತಯಾರಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!