ಕೇಂದ್ರ ಸರ್ಕಾರ ನಮ್ಮ ತೆರಿಗೆ ಹಣವನ್ನು ನಮಗೆ ನೀಡುತ್ತಿಲ್ಲ: ಸಿದ್ದರಾಮಯ್ಯ

ಹೊಸದಿಗಂತ ವರದಿ ಹಾವೇರಿ:

ಬರಗಾಲದ ಹಿನ್ನೆಲೆಯಲ್ಲಿ ನರೇಗಾ ಅಡಿ 100 ಕೆಲಸದ ದಿನಗಳನ್ನು 150 ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರದ ಅನುಮತಿ ಕೇಳಿದ್ದೇವೆ. ಆದರೆ ಕೇಂದ್ರ ಸರ್ಕಾರದ ಇನ್ನೂ ಅನುಮತಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕಾಗಿನೆಲೆಯಲ್ಲಿ ನಡೆಯುತ್ತಿರುವ ಕನಕ ಜಯಂತಿ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಬರ ಪರಿಹಾರಕ್ಕಾಗಿ ಕೆಂದ್ರ ಸರಕಾರದ ನಮ್ಮ ತೆರಿಗೆ ಹಣವನ್ನು ನಮಗೆ ನೀಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ನಿಗಮ ಮಂಡಳಿಗೆ ನೇಮಕ ವಿಚಾರದಲ್ಲಿ ನಮ್ಮ ಶಾಸಕರಿಗೆ ಮೊದಲ ಆಧ್ಯತೆ ನಿಡಲಿದ್ದೆವೆ. ಈ ಕುರಿತು ಡಿಸಿಎಂ ಜತೆ ಚರ್ಚಿಸಿ ನಿರ್ದಾರ ಕೈಗೊಳ್ಳುತ್ತೇವೆ ಎಂದರು.

ಬಿ.ಆರ್ ಪಾಟೀಲ ಸದನಕ್ಕೆ ಹಾಜರಾಗುವುದಿಲ್ಲ ಎಂಬ ಹೇಳಿಕೆ ಕುರಿತು ಮಾತನಾಡಿ ಅವರ ಜತೆ ಮಾತನಾಡಿ ಸರಿಪಡಿಸುತ್ತೇವೆ ಎಂದು ಜಾರಿಕೊಂಡರು. ಇನ್ನು ಡಿಕೆಶಿ ಅವರ ಸಿಬಿಐ ಕೇಸ್ ವಾಪಸ್ ಪ್ರಕರಣಕ್ಕೆ ಸಂಬಂದಿಅಇದಂರೆ ಪ್ರತಿಕ್ರಿಯಿಸಿ ನಾನೊಬ್ಬ ವಕೀಲನಾಗಿ, ಈ ಹಿಂದಿನ ಸರ್ಕಾರ ನೀಡಿದ್ದ ಕೆಸ್ ವಾಪಸ್ ಪಡೆದಿದ್ದೇನೆ ಅದರಲ್ಲಿ ಹುರುಳಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!