ನನ್ನ ಮಾಜಿ ಗಂಡ-ಧನುಷ್‌ ನಡುವೆ ಏನೋ ಇತ್ತು.. ಮತ್ತೊಂದು ಬಾಂಬ್‌ ಹಾಕಿದ ಸಿಂಗರ್‌ ಸುಚಿತ್ರಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಗಾಯಕಿ ಸುಚಿತ್ರಾ ಸದ್ಯ ಟಾಲಿವುಡ್​ನಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ನಟ ಧನುಷ್-ಐಶ್ವರ್ಯಾ ರಜನಿಕಾಂತ್​ ಡಿವೋರ್ಸ್​ ಬಗ್ಗೆ ಮಾತನಾಡುತ್ತಾ, ಇದೊಂದು ದಾಂಪತ್ಯ ದ್ರೋಹ ಎಂದು ಹೇಳಿದ್ದರು. ಆದರೆ ಇದೀಗ ಮತ್ತೊಂದು ಬಾಂಬ್‌ ಸಿಡಿಸಿದ್ದು, ಧನುಷ್‌ ಗೇ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದರ ಜೊತೆ ಜೊತೆಗೆ ನಟ ಧನುಷ್​ ಮತ್ತು ತನ್ನ ಮಾಜಿ ಪತಿ ಕಾರ್ತಿಕ್​ ಒಂದೇ ರೂಂ ಸೇರುತ್ತಿದ್ದರು ಎಂದು ಹೇಳಿದ್ದಾರೆ. ಈ ಹಿಂದೆ ಧನುಷ್‌ ಹಾಗೂ ಐಶ್ವರ್ಯಾ ಒಬ್ಬರಿಗೊಬ್ಬರು ಚೀಟ್‌ ಮಾಡಿಕೊಂಡಿದ್ದರು ಎಂದು ಹೇಳಿ ಸುದ್ದಿಯಾಗಿದ್ದರು. ಇದೀಗ ಧನುಷ್‌ ಗೇ ಎಂದು ಹೇಳಿದ್ದಾರೆ. ಇದು ಧನುಷ್‌ ಅಭಿಮಾನಿಗಳಿಗೆ ಸ್ವಲ್ಪವೂ ಇಷ್ಟವಾಗಿಲ್ಲ. ಅವರು ಗೇ ಆಗಿದ್ದರೂ ಪರವಾಗಿಲ್ಲ, ಪಬ್ಲಿಕ್‌ನಲ್ಲಿ ಹೀಗೆ ಮಾತಾಡೋದು ತಪ್ಪು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!