ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರ ನಗರ ಹೊರಭಾಗದ ಶ್ರೀ ಸಿದ್ದೇಶ್ವರ ಬಡಾವಣೆಯಲ್ಲಿ ಎರಡು ವರ್ಷದ ಹಿಂದಷ್ಟೇ ಹಸೆಮಣೆ ಏರಿದ್ದ ದಂಪತಿ ಮೃತದೇಹ ಪತ್ತೆಯಾಗಿದೆ.
ಮನೋಜಕುಮಾರ ಪೋಳ (30) ರಾಖಿ (23) ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಡ-ಹೆಂಡತಿ ಇಬ್ಬರೇ ಮನೆಯಲ್ಲಿದ್ದ ವೇಳೆ ಈ ಘಟನೆ ನಡೆದಿದೆ.
ನಿನ್ನೆ ತಡರಾತ್ರಿ ಊಟ ಆದ ನಂತರ ಇಬ್ಬರಿಗೂ ಮಕ್ಕಳ ವಿಷಯಕ್ಕೆ ಜಗಳ ಆಗಿದೆ. ಮಕ್ಕಳಾಗಿಲ್ಲ ಎನ್ನುವ ಕೊರಗಿನಲ್ಲಿದ್ದ ದಂಪತಿ ಜಗಳ ಆಡಿದ್ದಾರೆ. ಜಗಳ ತಾರಕಕ್ಕೇರಿ, ಇಬ್ಬರೂ ಮನನೊಂದು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.