Wednesday, November 30, 2022

Latest Posts

ಅಫ್ತಾಬ್ ವಾಸವಿದ್ದ ಫ್ಲಾಟ್‌ನಲ್ಲಿತ್ತು ಇನ್ನೆರೆಡು ಬ್ಯಾಗ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶವನ್ನೇ ಬೆಚ್ಚಿಬೀಳಿಸಿದ್ದ ಶ್ರದ್ಧಾ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಅಫ್ತಾಬ್ ಪೊಲೀಸರ ಬಳಿ ಇನ್ನಷ್ಟು ಸ್ಪೋಟಕ ಮಾಹಿತಿ ಹಂಚಿಕೊಂಡಿದ್ದಾನೆ. ಶ್ರದ್ಧಾ ಹತ್ಯೆ ಅಫ್ತಾಬ್ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದ, ಕೊಲೆ ಮಾಡಿದ ತಕ್ಷಣವೇ ಅಫ್ತಾಬ್ ಸಾಕ್ಷ್ಯ ನಾಶ ಮಾಡಿಲ್ಲ. ಕೊಲೆ ಮಾಡಿದ ಐದು ದಿನದ ನಂತರ ಅಫ್ತಾಬ್ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದಾನೆ.

ಐದು ದಿನದ ನಂತರ ಶ್ರದ್ಧಾಗೆ ಸಂಬಂಧಿಸಿದ ವಸ್ತುಗಳಿಗಾಗಿ ಇಡೀ ಮನೆಯನ್ನೇ ಅಫ್ತಾಬ್ ಜಾಲಾಡಿದ್ದಾನೆ. ಬೆಡ್‌ರೂಂನಲ್ಲಿ ಶ್ರದ್ಧಾ ಮೂರು ಫೋಟೊಗಳಿದ್ದು, ಫೋಟೊಗಳು ಗಾಜು ಒಡೆದು, ಫೋಟೊ ಅಡುಗೆ ಮನೆಯಲ್ಲಿ ಅಫ್ತಾಬ್ ಸುಟ್ಟು ಹಾಕಿದ್ದ.

ಇನ್ನು ಶ್ರದ್ಧಾ ಬಟ್ಟೆ ಹಾಗೂ ವಸ್ತುಗಳನ್ನು ಅಫ್ತಾಬ್ ಎರಡು ದೊಡ್ಡ ಬ್ಯಾಗ್‌ಗಳಿಗೆ ಹಾಕಿದ್ದ. ಈ ಎರಡು ಕವರ್‌ಗಳನ್ನು ಪೊಲೀಸರು ಅಫ್ತಾಬ್ ಫ್ಲಾಟ್‌ನಿಂದ ವಶಕ್ಕೆ ಪಡೆದಿದ್ದಾರೆ. ಅಫ್ತಾಬ್ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದು, ನಾಳೆ ಆತನಿಗೆ ಮಂಪರು ಪರೀಕ್ಷೆ ಮಾಡಲಾಗುತ್ತದೆ. ದೆಹಲಿಯ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮಂಪರು ಪರೀಕ್ಷೆ ನಡೆಯಲಿದ್ದು, ಸಂಪೂರ್ಣ ಸತ್ಯ ಹೊರಬರುವ ಸಾಧ್ಯತೆ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!