ಒತ್ತಡದ ಜೀವನಶೈಲಿಯಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಕಳಪೆ ಆಹಾರ ಪದ್ಧತಿ, ಬಿಡುವಿಲ್ಲದ ಜೀವನಶೈಲಿಯಿಂದ ಯಕೃತ್ತಿನ ಹಾನಿಯಾಗುವ ಸಮಸ್ಯೆಯು ಜನರಲ್ಲಿ ಹೆಚ್ಚಾಗಿ ಕಾಣಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಯಕೃತ್ತಿನ ಹಾನಿಯು ಯಾವುದೇ ವಯಸ್ಸಿನವರಲ್ಲಿ ಕಂಡುಬರುತ್ತದೆ.
ಯಾಕೆ ಬರುತ್ತದೆ?
ಬೇಗ ಬೇಗ ಅಗಿಯದೇ ಆಹಾರ ಸೇವನೆ ಮಾಡುವುದು
ಅತಿಯಾದ ಮಸಾಲೆ ಪದಾರ್ಥ ಸೇವನೆ ಮಾಡುವುದು
ಮದ್ಯಪಾನ ಹೆಚ್ಚು ಮಾಡುವುದು
ಒತ್ತಡದ ಜೀವನಶೈಲಿ
ಲಕ್ಷಣಗಳೇನು?
ಯಕೃತ್ತಿನಲ್ಲಿ ಸಮಸ್ಯೆಯಿದ್ದರೆ ಮುಖ ಅಥವಾ ದೇಹದ ಮೇಲೆ ರೋಗಲಕ್ಷಣಗಳನ್ನು ಕಾಣಿಸಿದರೆ, ಅವರು ತಕ್ಷಣವೇ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ. ಕಾಮಾಲೆ, ಆಯಾಸ, ದೌರ್ಬಲ್ಯ, ಹೊಟ್ಟೆ ನೋವು, ಊತ, ಹಸಿವು ಕಡಿಮೆಯಾಗುವುದು, ವಾಕರಿಕೆ, ಕಪ್ಪು ಅಥವಾ ಗಾಢ ಬಣ್ಣ ಮೂತ್ರದ ಲಕ್ಷಣಗಳು ಒಳಗೊಂಡಿರುತ್ತವೆ. ನೀವು ನಿರ್ದಿಷ್ಟವಾಗಿ ಈ ರೋಗಲಕ್ಷಣಗಳನ್ನು ಅನುಭವಿಸಿದರೆ, ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ತಿಳಿಸುತ್ತಾರೆ.
ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವ ಸಾಮಾನ್ಯ ಲಕ್ಷಣವೇ ಕಾಮಾಲೆಯಾಗಿದೆ. ಮುಖದ ಮೇಲೆ ಮೊಡವೆಗಳು ಬೆಳೆಯುತ್ತವೆ. ಮುಖದ ಹೊಳಪು ಕೂಡ ಕಡಿಮೆಯಾಗುತ್ತದೆ. ಯಕೃತ್ತು ವಿಷಕಾರಿ ಅಂಶಗಳನ್ನು ಸರಿಯಾಗಿ ಹೊರಹಾಕಲು ಸಾಧ್ಯವಾಗದಿದ್ದಾಗ ಈ ಸಮಸ್ಯೆಯು ಸಂಭವಿಸುತ್ತದೆ.
ಯಕೃತ್ತಿನ ವೈಫಲ್ಯವು ಚರ್ಮದಲ್ಲಿ ತುರಿಕೆಗೆ ಕಾರಣವಾಗುತ್ತದೆ. ರಕ್ತದಲ್ಲಿ ಕಲ್ಮಶಗಳು ಸಂಗ್ರಹವಾಗುವುದರಿಂದ ತುರಿಕೆ ಸಮಸ್ಯೆ ಹೆಚ್ಚಾಗುತ್ತದೆ. ಯಾವಾಗಲೂ ನಿಸ್ತೇಜವಾಗಿರುವುದು ಹಾಗೂ ಯಕೃತ್ತಿನ ಸಮಸ್ಯೆಗಳಿಂದ ಬಳಲುತ್ತಿರುವ ಭಾವನೆ ಉಂಟಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ. ಯಕೃತ್ತು ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ ನಂತರ, ಪಿತ್ತರಸದ ಕಂದು-ಹಳದಿ ವರ್ಣದ್ರವ್ಯ ಸರಿಯಾಗಿ ಬಿಡುಗಡೆಯಾಗುವುದಿಲ್ಲ. ದೇಹದಲ್ಲಿ ಇವುಗಳು ಹೆಚ್ಚುವುದರಿಂದ ಚರ್ಮ ಮತ್ತು ಕಣ್ಣುಗಳಿಗೆ ಹಾನಿಯಾಗಬಹುದು. ಇದನ್ನು ಜಾಂಡೀಸ್ ಎಂದೂ ಹೇಳುತ್ತಾರೆ.
ಪಿತ್ತಜನಕಾಂಗದ ವೈಫಲ್ಯದಿಂದಾಗಿ, ಚರ್ಮದ ಮೇಲೆ ಬೆಳಿ ಹಾಗೂ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಲಿವರ್ ಸ್ಪಾಟ್ಸ್ ಎಂದು ಹೇಳಲಾಗುತ್ತದೆ. ಯಕೃತ್ತಿನ ವೈಫಲ್ಯದಿಂದ ದೇಹದಲ್ಲಿ ಹಾರ್ಮೋನ್ ಬದಲಾವಣೆಗಳು ಆಗುತ್ತವೆ. ಇದು ಚರ್ಮದ ಬಣ್ಣದ ಮೇಲೆ ಪರಿಣಾಮ ಬೀರುತ್ತದೆ. ಕಪ್ಪು ಕಲೆಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ.