ಪ್ರಯಾಣಿಕರ ಗಮನಕ್ಕೆ.. ಯಶವಂತಪುರ ರೈಲು ನಿಲ್ದಾಣದ ಈ ಪ್ಲಾಟ್​ಫಾರಂಗಳು ಕ್ಲೋಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಯಶವಂತಪುರ ರೈಲು ನಿಲ್ದಾಣದ  ಪ್ಲಾಟ್​ಫಾರಂಗಳಲ್ಲಿ ಏರ್​-ಕಾನ್ಕೋರ್ಸ್ ಅಳವಡಿಕೆ ಕಾಮಗಾರಿ ಆರಂಭವಾಗಲಿದೆ. ಹೀಗಾಗಿ ನಿಲ್ದಾಣದ 2, 3, 4, 5 ಪ್ಲಾಟ್​ಫಾರಂಗಳನ್ನು 15 ದಿನಗಳ ಕಾಲ ಬಂದ್​ ಮಾಡಲಾಗುತ್ತದೆ. ಹಾಗೆ ಕೆಲ ರೈಲುಗಳ ಸಂಚಾರವನ್ನು ಬಂದ್​ ಮಾಡಲಾಗಿದೆ.

ಆಗಸ್ಟ್​ 21 ರಿಂದ ಸೆಪ್ಟೆಂಬರ್​​ 4ರ ವರೆಗೆ 2 ಮತ್ತು 3ನೇ ಪ್ಲಾಟ್​ಫಾರಂ ಬಂದ್​ ಆಗಲಿದೆ. ನಂತರ ಸೆಪ್ಟೆಂಬರ್​ 5 ರಿಂದ 19ರ ವರೆಗೆ 4 ಮತ್ತು 5ನೇ ಪ್ಲಾಟ್​ಫಾರಂ ಕ್ಲೋಸ್​ ಆಗಲಿದೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ರೈಲು ರದ್ದು ವಿವರ ಈ ಕೆಳಗಿನಂತಿದೆ.

06576 ತುಮಕೂರು-ಕೆಎಸ್ಆರ್ ಬೆಂಗಳೂರು ಮತ್ತು 06575 ಕೆಎಸ್ಆರ್ ಬೆಂಗಳೂರು-ತುಮಕೂರು ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ರದ್ದುಪಡಿಸಲಾಗಿದೆ.

ರೈಲು ಸಂಖ್ಯೆ 06574, 06580 ತುಮಕೂರು-ಯಶವಂತಪುರ ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಚಿಕ್ಕಬಾಣಾವರ-ಯಶವಂತಪುರ ನಡುವೆ ಭಾಗಶಃ ರದ್ದಾಗಲಿದೆ. ರೈಲು ಸಂಖ್ಯೆ 06591, 06592 ಯಶವಂತಪುರ-ಹೊಸೂರು ಮಧ್ಯೆ, ಸಂಚರಿಸುವ ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಯಶವಂತಪುರ-ಹೆಬ್ಬಾಳ ನಡುವೆ ಭಾಗಶಃ ರದ್ದಾಗಲಿದೆ.

ರೈಲು ಸಂಖ್ಯೆ 06593, 06594 ಯಶವಂತಪುರ-ಚಿಕ್ಕಬಳ್ಳಾಪುರ ರೈಲು ಸಂಚಾರ ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಯಶವಂತಪುರ-ಯಲಹಂಕ ನಡುವೆ ಭಾಗಶಃ ರದ್ದಾಗಲಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!