July 18, 2026
Saturday, July 18, 2026
spot_img

ರಸಮಲಾಯಿ ರುಚಿಯನ್ನೂ ಮೀರಿಸುತ್ತೆ ಈ ಸ್ವೀಟ್ ಬ್ರೆಡ್ ರೋಲ್ಸ್: ಇಂದೇ ಟ್ರೈ ಮಾಡಿ

ಮನೆಯಲ್ಲಿ ಖೋವಾ ಅಥವಾ ಮಿಲ್ಕ್ ಪೌಡರ್ ಇದ್ದಾಗ ಹೋಟೆಲ್ ಶೈಲಿಯಲ್ಲಿ ಇನ್ಸ್ಟಂಟ್ ಆಗಿ ಮಾಡಬಹುದಾದ ಬ್ರೆಡ್ ಮಾವಾ/ಮಲೈ ರೋಲ್‌ ರೆಸಿಪಿ ಇಲ್ಲಿದೆ. ಇದು ತಿನ್ನಲು ರಸಗುಲ್ಲಾ ಅಥವಾ ರಸಮಲಾಯಿಯಷ್ಟೇ ಅದ್ಭುತ ರುಚಿ ನೀಡುತ್ತದೆ.

ಬೇಕಾಗುವ ಸಾಮಗ್ರಿಗಳು:

ಬ್ರೆಡ್ ಸ್ಲೈಸ್‌ಗಳು:

ಖೋವಾ/ಮಾವಾ

ಹಾಲು

ಸಕ್ಕರೆ

ಏಲಕ್ಕಿ ಪುಡಿ

ಡ್ರೈ ಫ್ರೂಟ್ಸ್ ಚೂರುಗಳು

ಕೇಸರಿ ದಳಗಳು

ಇದನ್ನೂ ಓದಿ:

ಮಾಡುವ ವಿಧಾನ:

ಮೊದಲುಒಂದು ದಪ್ಪ ತಳದ ಪಾತ್ರೆಗೆ 2 ಕಪ್ ಹಾಲು ಹಾಕಿ ಕಾಯಲು ಇಡಬೇಕು.ಹಾಲು ಅರ್ಧದಷ್ಟು ದಪ್ಪಗಾಗುವವರೆಗೆ ಸಣ್ಣ ಉರಿಯಲ್ಲಿ ಕುದಿಸಿ. ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಮತ್ತು ಕೇಸರಿ ದಳಗಳನ್ನು ಸೇರಿಸಿ 2 ನಿಮಿಷ ಕೈಯಾಡಿಸಿ ಗ್ಯಾಸ್ ಆಫ್ ಮಾಡಿ. ಈ ಹಾಲಿನ ಮಿಶ್ರಣ ತಣ್ಣಗಾಗಲು ಬಿಡಬೇಕು. ನಂತರ ಒಂದು ಬಾಣಲೆಗೆ ಹಸಿ ಖೋವಾ  2 ಚಮಚ ಸಕ್ಕರೆ ಮತ್ತು ಡ್ರೈ ಫ್ರೂಟ್ಸ್ ಚೂರುಗಳನ್ನು ಹಾಕಿ 3-4 ನಿಮಿಷ ಸಣ್ಣ ಉರಿಯಲ್ಲಿ ಬಿಸಿ ಮಾಡಿ.ಮಿಶ್ರಣವು ಒಟ್ಟಿಗೆ ಸೇರಿ ಮುದ್ದೆಯಾದಾಗ ಉರಿ ಆಫ್ ಮಾಡಿ ತಣ್ಣಗಾಗಲು ಬಿಡಬೇಕು.

ಮಿಶ್ರಣ ತಣ್ಣಗಾದ ಮೇಲೆ ಸಣ್ಣ ಸಿಲಿಂಡರ್ ಆಕಾರದ ರೋಲ್‌ಗಳನ್ನು ಮಾಡಿಟ್ಟುಕೊಂಡು. ಪ್ರತಿ ಬ್ರೆಡ್ ಸ್ಲೈಸ್‌ನ ನಾಲ್ಕೂ ಕಡೆ ಇರುವ ಕಂದು ಬಣ್ಣದ ಅಂಚುಗಳನ್ನುಚಾಕುವಿನಿಂದ ಕತ್ತರಿಸಿ ತೆಗೆದು. ಚಪಾತಿ ಲಟ್ಟಣಿಗೆಯನ್ನು ಬಳಸಿ ಬ್ರೆಡ್ ಸ್ಲೈಸ್ ಅನ್ನು ಸಾಧ್ಯವಾದಷ್ಟು ತೆಳ್ಳಗೆ ಲಟ್ಟಿಸಿಕೊಳ್ಳಬೇಕು. ನಂತರ ಲಟ್ಟಿಸಿದ ಬ್ರೆಡ್‌ನ ಒಂದು ತುದಿಯಲ್ಲಿ ಮಾಡಿಟ್ಟುಕೊಂಡ ಖೋವಾ ರೋಲ್ ಅನ್ನು ಇಟ್ಟು, ನಿಧಾನವಾಗಿ ಸುರುಳಿಯಾಕಾರದಲ್ಲಿ ಸುತ್ತಿ, ಬ್ರೆಡ್ ಕೊನೆಯ ಅಂಚಿಗೆ ಸ್ವಲ್ಪ ಹಾಲನ್ನು ಸವರಿ ರೋಲ್ ಅನ್ನು ಲಾಕ್ ಮಾಡಬೇಕು. ನಂತರ ಪ್ಲೇಟ್‌ನಲ್ಲಿ ಜೋಡಿಸಿ ಬ್ರೆಡ್ ರೋಲ್‌ಗಳ ಮೇಲೆ  ಮೊದಲೇ ಸಿದ್ಧಪಡಿಸಿಟ್ಟ ತಣ್ಣಗಿನ ರಬ್ದಿ ಸಂಪೂರ್ಣವಾಗಿ ಮುಳುಗುವಂತೆ ಸುರಿದು, ಬಾದಾಮಿ ಮತ್ತು ಪಿಸ್ತಾ ಚೂರುಗಳಿಂದ ಅಲಂಕರಿಸಿ ಫ್ರಿಡ್ಜ್‌ನಲ್ಲಿ ಅರ್ಧ ಗಂಟೆ ಇಟ್ಟು ತಣ್ಣಗಾದ ಮೇಲೆಸವಿದರೆ ಅದ್ಭುತವಾಗಿ ಇರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !