Monday, January 30, 2023

Latest Posts

CINE NEWS |ಗೂಗಲ್‌ನ ಟಾಪ್ 5 ಸಿನಿಮಾ ಪಟ್ಟಿಯಲ್ಲಿ ಅಬ್ಬರಿಸಿದೆ ಕನ್ನಡದ ಈ ಎರಡು ಸಿನಿಮಾಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ವರ್ಷ ಕನ್ನಡ ಸಿನಿಮಾಗಳ ವಿಶ್ವದಾದ್ಯಂತ ಸದ್ದು ಮಾಡಿವೆ. 2022ರಲ್ಲಿ ಜನರು ಅತಿ ಹೆಚ್ಚು ಹುಡುಕಿದ ಭಾರತೀಯ ಸಿನಿಮಾದ ಪಟ್ಟಿಯಲ್ಲಿ ಕನ್ನಡದ ಎರಡು ಸಿನಿಮಾ ಇದೆ.

Kantara box office collection: Rishab Shetty's film is now the BIGGEST 'non- KGF' hit in the industryಯಾವುದು ಅಂತೀರಾ? ಡೌಟೇ ಇಲ್ಲ, ನೀವಂದುಕೊಂಡಿದ್ದೇ ಸರಿ. ಕಾಂತಾರ ಮತ್ತು ಕೆಜಿಎಫ್-2. ಈ ವರ್ಷ ಕನ್ನಡ ಚಿತ್ರಂಗದ ಪಾಲಿಗೆ ಅದ್ಭುತ ವರ್ಷವಾಗಿದ್ದು, ಕನ್ನಡ ಸಿನಿಮಾಗಳು ಜಗತ್ತನ್ನೇ ಮುಟ್ಟಿವೆ.

Kantara set to record higher footfalls than KGF: Chapter 2 in Karnatakaಯಶ್ ಅಭಿನಯದ ಕೆಜಿಎಫ್-ಚಾಪ್ಟರ್-2 ಹಾಗೂ ರಿಷಬ್ ಶೆಟ್ಟಿ ನಟನೆಯ ಕಾಂತಾರ ಸಿನಿಮಾಗಳನ್ನು ದೇಶಾದ್ಯಂತ ಎಲ್ಲರೂ ಒಪ್ಪಿದ್ದಾರೆ. ಈ ಎರಡೂ ಸಿನಿಮಾ ಮೂಡಿಬಂದಿದ್ದು ಹೊಂಬಾಳೆ ಫಿಲ್ಮ್ಸ್‌ನಿಂದ. 2022 ರಲ್ಲಿ ಜನರು ಹೆಚ್ಚು ಸರ್ಚ್ ಮಾಡಿದ ಭಾರತದ ಟಾಪ್ 5 ಸಿನಿಮಾಗಳಲ್ಲಿ ಈ ಎರಡು ಕನ್ನಡ ಸಿನಿಮಾಗಳನ್ನು ನೀವು ಕಾಣಬಹುದು.

Kantara Box Office Day 7 (Hindi): Rishab Shetty Starrer Has A Fantastic Trend, Could Well Challenge KGF Chapter 1 [Hindi] Lifetimeಟಾಪ್ 10 ಸಿನಿಮಾಗಳು ಇಂತಿವೆ..

  1. ಬ್ರಹ್ಮಾಸ್ತ್ರ-ಪಾರ್ಟ್ 1 ಶಿವ
  2. ಕೆ.ಜಿ.ಎಫ್- ಚಾಪ್ಟರ್ 2
  3. ದಿ ಕಶ್ಮೀರ್ ಫೈಲ್ಸ್
  4. ಆರ್‌ಆರ್‌ಆರ್
  5. ಕಾಂತಾರ
  6. ಪುಷ್ಪ-ದಿ ರೈಸ್
  7. ವಿಕ್ರಮ್
  8. ಲಾಲ್ ಸಿಂಗ್ ಚಡ್ಡಾ
  9. ದೃಶ್ಯ-2
  10. ಥಾರ್- ಲವ್ ಆಂಡ್ ಥಂಡರ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!