ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕಳ್ಳನ ಕೈಚಳಕ, ವಾಶ್‌ರೂಂಗೆ ಹೋಗಿ ಬರೋದ್ರೊಳಗೆ ಬ್ಯಾಗ್ ಮಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ಏರ್‌ಪೋರ್ಟ್‌ನಲ್ಲಿ ಒಬ್ಬರ ವಸ್ತು ಮತ್ತೊಬ್ಬರು ಮುಟ್ಟೋದಿಲ್ಲ. ಆದರೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಪ್‌ಟಾಪ್ ಇಟ್ಟಿದ್ದ ಬ್ಯಾಗ್‌ನ್ನು ಕಳ್ಳ ಕದ್ದಿದ್ದಾನೆ.

ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ವಾಶ್‌ರೂಂಗೆ ಹೋಗಿ ಬರುವಷ್ಟರಲ್ಲಿ ಲ್ಯಾಪ್‌ಟಾಪ್ ಇಟ್ಟಿದ್ದ ಬ್ಯಾಗ್ ಕಾಣೆಯಾಗಿದೆ. ಕೋರಮಂಗಲ ನಿವಾಸಿ ಭವಿತ್ ಗೋಯಲ್ ವಾಶ್‌ರೂಂ ಹೊರಗೆ ತಮ್ಮ ಬ್ಯಾಗ್ ಇಟ್ಟು ಒಳಗೆ ಹೋಗಿದ್ದರು. ವಾಪಾಸ್ ಬರುವಾಗ ಬ್ಯಾಗ್ ಕಾಣೆಯಾಗಿದೆ. ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಭವಿತ್ ಏರ್‌ಪೋರ್ಟ್‌ಗೆ ತಡವಾಗಿ ಬಂದು ಫ್ಲೈಟ್ ಮಿಸ್ ಮಾಡಿಕೊಂಡಿದ್ದರು. ಹಾಗಾಗಿ ಕಾಯುತ್ತಾ ಕುಳಿತಿದ್ದರು. ಈ ವೇಳೆ ವಾಶ್‌ರೂಂಗೆ ಹೋಗಲು ಬ್ಯಾಗ್ ಇಟ್ಟಿದ್ದು, ಬ್ಯಾಗ್ ಕಾಣೆಯಾಗಿದೆ. ಸಾಮಾನ್ಯವಾಗಿ ಏರ್‌ಪೋರ್ಟ್‌ನಲ್ಲಿ ಸಾಕಷ್ಟು ಭದ್ರತೆ, ಸಿಸಿ ಕ್ಯಾಮೆರಾಗಳಿದ್ದರೂ ಕಳ್ಳ ಕದ್ದಿದ್ದು ಹೇಗೆ ತಿಳಿದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!