Wednesday, November 30, 2022

Latest Posts

ವೃದ್ಧೆಯ ಕಾಲು ಕತ್ತರಿಸಿ ಕಾಲಿನ ಕಡಗ ಕದ್ದೊಯ್ದ ದುಷ್ಕರ್ಮಿಗಳು 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಡಗಕ್ಕಾಗಿ ವೃದ್ಧೆಯ ಎರಡೂ ಕಾಲುಗಳನ್ನು ಕಳ್ಳರು ಕತ್ತರಿಸಿರುವ ಅಮಾನುಷ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಜೈಪುರದ ಘಾಟ್ಲಾ ಪೊಲೀಸ್ ಠಾಣೆಯ ಕಾಲೋನಿಯಲ್ಲಿ ನೂರು ವರ್ಷದ ವೃದ್ದೆಯ ಕಾಲಿಗಿದ್ದ ಬೆಳ್ಳಿ ಕಡಗಗಳ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಂದ ಕಳ್ಳರು ವೃದ್ಧೆಯ ಎರಡೂ ಕಾಲುಗಳನ್ನು ಕತ್ತರಿಸಿ ಕಡಗಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಹೊರಗೆ ಹೋದ ಮೊಮ್ಮಗಳು ಮನೆಗೆ ಬರುವಷ್ಟರಲ್ಲಿ ವೃದ್ಧೆ ಎರಡೂ ಕಾಲುಗಳನ್ನು ಕಳೆದುಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆ ದೃಶ್ಯಗಳನ್ನು ನೋಡಿ ಹೆದರಿದ ಆಕೆ ಕೂಡಲೇ ತನ್ನ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಅಕ್ಕಪಕ್ಕದವರು ಪೊಲೀಸರಿಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂತ್ರಸ್ತೆಯನ್ನು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತುಂಡರಿಸಿದ ಎರಡು ಕಾಲುಗಳನ್ನು ವೈದ್ಯರಿಗೆ ಒಪ್ಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ವೃದ್ಧೆ ಚಿಕಿತ್ಸೆ ಪಡೆಯುತ್ತಿದ್ದು, ಅಜ್ಜಿಯ ಕುತ್ತಿಗೆಯ ಮೇಲೂ ಇರಿತದ ಗಾಯಗಳಾಗಿವೆ. ಕಳ್ಳರಿಗಾಗಿ ಬಲೆ ಬೀಸಿರುವುದು ಬೆಳಕಿಗೆ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!