ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧಿಜಿಯವರನ್ನು ಎಷ್ಟು ನೆನೆಯುತ್ತೇವೊ ಅಷ್ಟೇ ಸುಭಾಷ್, ಆಜಾದ್ ಮುಂತಾದವರನ್ನೂ ಸ್ಮರಿಸಬೇಕು:‌ ಬಿ.ಎಲ್.ಸಂತೋಷ್‌

ಹೊಸದಿಗಂತ ವರದಿ ಹುಬ್ಬಳ್ಳಿ:

ಕೇವಲ ಗಾಂಧಿಜಿ ಮಾಡಿದ ಚಳವಳಿಗೆ ಸ್ವಾತಂತ್ರ್ಯ ಸಿಕ್ಕಿದೆ ಎಂದರೆ ಉಳಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಅದು ಅವಮಾನ ಮಾಡಿದ ಹಾಗೆ. ಇತಿಹಾಸ ಪುಟಗಳಲ್ಲಿ ಎಷ್ಟೋ ಹೋರಾಟಗಾರರ ಸ್ಮರಣೆ ಅಗದಿರುವುದು ವಿಷಾದಕರ. ಗಾಂಧಿಜಿಯನ್ನು ಎಷ್ಟು ನೆನೆಯುತ್ತೇವೊ ಅಷ್ಟೆ ಸುಭಾಷ್, ಆಝಾದ ಮುಂತಾದವರನ್ನು ಸ್ಮರಿಸಬೇಕು ಎಂದು ಭಾಜಪ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಹೇಳಿದರು.

ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಸ್ವರಾಜ್ 75 ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.‌

ವಿಆರ್ ಎಲ್ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಮಾತನಾಡಿ, ನಮ್ಮ ದೇಶದ ಸ್ವಾತಂತ್ರ್ಯಕ್ಕೆ ಪ್ರಾಣಾರ್ಪಣೆಗೈದವರ ಸ್ಮರಣೆ ಈ‌ ಪುಸ್ತಕದಲ್ಲಾಗಿದೆ. ಭಾರತೀಯ ಸಂಸ್ಕೃತಿ ಮುಂದಿನ ಪೀಳಿಗೆಗೆ ವರ್ಗಾಯಿಸುವುದಾದರೆ ಅದು ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಂಯೋಜಕರಾದ ನಂದಕುಮಾರ ಅವರು ರಚಿಸಿದ ಈ ಪುಸ್ತಕವನ್ನು ಡಾ. ಸಂತೋಷ ಪಿ.ಕೆ.‌ ಕನ್ನಡಕ್ಕೆ ಅನುವಾದಿಸಿದ್ದಾರೆ. ಸ್ವರಾಜ 75 ಪುಸ್ತಕವನ್ನು ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!