ಬಟ್ಟೆ ಅಂಗಡಿಯಲ್ಲಿ ಚಾಣಕ್ಷ್ಯತೆಯಿಂದ 1.70 ಕೋಟಿ ಕದ್ದ ಕಳ್ಳರು, ಅವರ ಸಣ್ಣ ತಪ್ಪಿಂದಲೇ ಪೊಲೀಸರಿಗೆ ಸಿಕ್ಕಿತು ದೊಡ್ಡ ಸುಳಿವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸೋಮವಾರ ಮುಂಜಾನೆ ಮಹಾರಾಷ್ಟ್ರದ ಜಲ್ನಾದಲ್ಲಿ ಸಗಟು ಬಟ್ಟೆ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರ ಗುಂಪು 1.70 ಕೋಟಿ ಕಳ್ಳತನ ಮಾಡಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳ್ಳರು ಕಳ್ಳತನ ಮಾಡುವಾಗಿ ಸಾಕಷ್ಟು ಚಾಣಕ್ಷ್ಯತೆಯಿಂದ ವರ್ತಿಸಿದ್ದಾರೆ. ಅಂಗಡಿಯಲ್ಲಿ ಕಳ್ಳತನವಾಗಿರುವ ಯಾವುದೇ ಲಕ್ಷಣಗಳಿರಲಿಲ್ಲ. ಕಟ್ಟಡದ ಯಾವುದೇ ಭಾಗವನ್ನು ಒಡೆದಿಲ್ಲ. ಸಾಕ್ಷ್ಯವನ್ನು ಅಳಿಸಲು ಅಂಗಡಿಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳನ್ನು ಕದ್ದೊಯ್ದಿದ್ದಾರೆ, ಅಂಗಡಿಯಲ್ಲಿ ಎಲ್ಲಾ ವಸ್ತುಗಳು ಸುರಕ್ಷಿತವಾಗಿದ್ದು ಕ್ಯಾಷ್‌ ಕೌಂಟರ್‌ ನಲ್ಲಿದ್ದ ನಗದು ಹಣ ಮಾತ್ರ ನಾಪತ್ತೆಯಾಗಿದೆ. ಜೊತೆಗೆ ಬೆರಳಚ್ಚುಗಳು ಬೀಳದಂತೆ ಎಚ್ಚರ ವಹಿಸಿದ್ದಾರೆ.
ಅಷ್ಟೆಲ್ಲಾ ಎಚ್ಚರಿಕೆ ವಹಿಸಿಯೂ ಮೂಲೆಯಲ್ಲಿದ್ದ ಒಂದು ಸಿಸಿ ಕ್ಯಾಮೆರಾ ಕಳ್ಳರ ಕಣ್ಣಿಗೆ ಬಿದ್ದಿಲ್ಲ. ಈ ಕ್ಯಾಮೆರಾವನ್ನು ಅಲ್ಲಿಯೇ ಬಿಟ್ಟುಹೋಗುವ ಮೂಲಕ ಕಳ್ಳರು ದೊಡ್ಡ ಸಾಕ್ಷ್ಯ ವನ್ನು ಉಳಿಸಿಹೋಗಿದ್ದಾರೆ. ಈ ಒಂಟಿ ಕ್ಯಾಮೆರಾದ ದೃಶ್ಯಗಳನ್ನು ತೆಗೆಯಲಾಗುತ್ತಿದೆ. ಪರಿಶೀಲಿಸಲಾಗುತ್ತಿದೆ,” ಎಂದು ಎಂದು ಸದರ್ ಬಜಾರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
“ಅಂಗಡಿಯ ದೈನಂದಿನ ವಹಿವಾಟಿನಿಂದ ಬಂದ ಹಣವನ್ನು ಲಾಕರ್‌ ನಲ್ಲಿ ಇರಿಸಲಾಗಿತ್ತು, ಆದರೆ ಅದನ್ನು ಲಾಕ್ ಮಾಡಿರಲಿಲ್ಲ” ಎಂದು ಇನ್ಸ್‌ಪೆಕ್ಟರ್ ಜ್ಞಾನೇಶ್ವರ್ ಪಯಘನ್ ಹೇಳಿದ್ದಾರೆ.
ಕಟ್ಟಡದ ಎಸಿ ಮಾರ್ಗದ ಮೂಲಕ ಕಳ್ಳರು ಪ್ರವೇಶಿಸಿರಬಹುದು ಎಂದು ಅಪರಾಧ ವಿಭಾಗದ ಅಧಿಕಾರಿ ಸುಭಾಷ್ ಭುಜಂಗ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!