ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ತಿಮ್ಮಯ್ಯ ಮೊಮ್ಮಗಳು ಅಮೃತಾ ಭೇಟಿ

 ಹೊಸ ದಿಗಂತ ವರದಿ, ಮಡಿಕೇರಿ:

ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ತಿಮ್ಮಯ್ಯ ಅವರ ಮೊಮ್ಮಗಳು ಅಮೃತಾ ಸಂತೋಷ್ ಅವರು ಗುರುವಾರ ಭೇಟಿ ನೀಡಿ ಸ್ಮಾರಕ ಭವನ ವೀಕ್ಷಿಸಿದರು.
ಇದೇ ಮೊದಲ ಬಾರಿಗೆ ತಿಮ್ಮಯ್ಯ ಸ್ಮಾರಕ ಭವನಕ್ಕೆ ಭೇಟಿ ನೀಡಿದ ಅಮೃತಾ, ತನ್ನ ಅಜ್ಜ ತಿಮ್ಮಯ್ಯ ಅವರ ಸ್ಮರಣಾರ್ಥ ಸರ್ಕಾರ ರೂಪಿಸಿದ ಸಂಗ್ರಹಾಲಯ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಮ್ಯೂಸಿಯಂಬ ವ್ಯವಸ್ಥಾಪಕ ಸುಬೇದಾರ್ ಮೇಜರ್ ಗೌಡಂಡ ತಿಮ್ಮಯ್ಯ ಇಲ್ಲಿನ ಸಂಗ್ರಹದ ಬಗ್ಗೆ ಮಾಹಿತಿ ನೀಡಿದರು.
ಅಮೖತಾ ಅವರು ಜನರಲ್ ತಿಮ್ಮಯ್ಯ ಅವರ ಪುತ್ರಿ ಮಿರೆಲ್ ಹಾಗೂ ಮೇಜರ್ ಜನರಲ್ ಕೊಂಗೇಟಿರ ಚಂಗಪ್ಪ ಅವರ ಪುತ್ರಿಯಾಗಿದ್ದು, ಉತ್ತರಾಂಚಲ್‍ನ ಅಲ್ಮೋರಾ ಎಂಬಲ್ಲಿ ನೆಲೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!