Sunday, December 4, 2022

Latest Posts

ಚೀನಾದಲ್ಲಿ ಕಟ್ಟೆಯೊಡೆದ ಜನರ ಸಹನೆ: ವಿಶ್ವದ ಅತಿ ದೊಡ್ಡ ಐಫೋನ್ ಫ್ಯಾಕ್ಟರಿ ಬಳಿ ಗಲಾಟೆಯ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಚೀನಾದಲ್ಲಿರುವ ವಿಶ್ವದ ಅತಿದೊಡ್ಡ ಆಪಲ್ ಐಫೋನ್ ಕಾರ್ಖಾನೆಯಲ್ಲಿ ಗಲಾಟೆ ನಡೆದಿದೆ. ಝೆಂಗ್‌ಝೌನಲ್ಲಿರುವ ಫಾಕ್ಸ್‌ಕಾನ್ ಸ್ಥಾವರದಲ್ಲಿ ಸಾವಿರಾರು ಕಾರ್ಮಿಕರು ಪ್ರತಿಭಟನೆ ನಡೆಸಿ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದರು. ಚೀನಾ ಶೂನ್ಯ ಕೋವಿಡ್ ನೀತಿಗೆ ಬೇಸತ್ತ ಜನರ ಸಹನೆ ಕಟ್ಟೆಯೊಡೆದಿದೆ. ಈ ಹಿನ್ನೆಲೆಯಲ್ಲಿ ‘ಫಾಕ್ಸ್ ಕಾನ್ ಪ್ಲಾಂಟ್’ನಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಲಾಗಿದೆ. ಚೀನಾ ಸರ್ಕಾರದ ಈ ವರ್ತನೆ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲರೂ ಒಮ್ಮೆಲೇ ಹೊರ ಬಂದಿದ್ದರಿಂದ ರಣರಂಗದ ವಾತಾವರಣ ನಿರ್ಮಾಣವಾಯಿತು.

ಕೆಲವರು ಇದಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಭದ್ರತಾ ಪಡೆಗಳು ಫಾಕ್ಸ್‌ಕಾನ್ ಸ್ಥಾವರದಲ್ಲಿ ನೌಕರರ ಮೇಲೆ ದಾಳಿ ನಡೆಸಿವೆ. ಕೆಲವು ನೌಕರರ ತಲೆ ಮತ್ತು ಮುಖದ ಮೇಲೆ ರಕ್ತ ಕಾಣಿಸಿಕೊಂಡಿದೆ. ಪೊಲೀಸರು ಲಾಠಿ ಪ್ರಹಾರ ನಡೆಸಿದರು.  ಪ್ರತಿಭಟನಕಾರರು ‘ಫಾಕ್ಸ್‌ಕಾನ್‌ ಪ್ಲಾಂಟ್‌’ ಬಿಟ್ಟು ಬೇರೆ ಪ್ರದೇಶಕ್ಕೆ ಹೋಗದಂತೆ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ತಳ್ಳಲು ಯತ್ನಿಸಿದರು.

ನೌಕರರಿಗೆ ಸೂಕ್ತ ಸೌಲಭ್ಯ ಕಲ್ಪಿಸದಿರುವುದು ಮಾತ್ರವಲ್ಲದೆ ವೇತನ ಪಾವತಿಯಲ್ಲಿ ವಿಳಂಬವಾಗುತ್ತಿದೆ ಎಂದು ದೂರಿದರು. ಚೀನಾ ಕಟ್ಟುನಿಟ್ಟಾದ ಕರೋನಾ ನಿರ್ಬಂಧಗಳನ್ನು ಹೇರುತ್ತಿರುವುದರಿಂದ, ಅನೇಕ ಪ್ರದೇಶಗಳಲ್ಲಿ ಜನರು ಹತಾಶೆಗೊಂಡು ಪ್ರತಿಭಟನೆ ಪ್ರಾರಂಭಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!