ಹೊಸದಿಗಂತ ಡಿಜಿಟಲ್ ಡೆಸ್ಕ್:
ಆತ್ಮನಿರ್ಭರ ಭಾರತದ ಪರಿಕಲ್ಪನೆಯೊಂದಿಗೆ ರಕ್ಷಣಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗ ಹೊರಟಿದ್ದು ದೇಶೀಯವಾಗಿ ನಿರ್ಮಾಣಗೊಂಡ ಕ್ಷಿಪಣಿ ವಿಧ್ವಂಸಕ ನೌಕೆ ಐಎನ್‌ಎಸ್ ಮುರ್ಮುಗಾವ್ ಅನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದ್ದು ಅತ್ಯಾಧುನಿಕ ತಾಂತ್ರಿಕ ಸೌಲಭ್ಯ ಹೊಂದಿರುವ ನೌಕೆ ಇದಾಗಿದ್ದು ಭವಿಷ್ಯದ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ನೌಕಾಸೇನೆಗೆ ಬಲ ತುಂಬಲಿದೆ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಐಎನ್‌ಎಸ್ ಮುರ್ಮುಗೋ ಬಗ್ಗೆ ನೀವು ತಿಳಿದಿರಬೇಕಾದ ಸಂಗತಿಗಳು ಇಲ್ಲಿವೆ.
- ಯುದ್ಧನೌಕೆಯು ಅತ್ಯಾಧುನಿಕ ಸಂವೇದಕಗಳು, ಆಧುನಿಕ ರಾಡಾರ್ ಮತ್ತು ಮೇಲ್ಮೈಯಿಂದ ಮೇಲ್ಮೈಗೆ ಮತ್ತು ಮೇಲ್ಮೈಯಿಂದ ಗಾಳಿಗೆ ಉಡಾಯಿಸಬಲ್ಲ ಕ್ಷಿಪಣಿಗ ವ್ಯವಸ್ಥೆ ಹೊಂದಿದೆ.
- 450ಕಿಮಿ ವ್ಯಾಪ್ತಿ ಹೊಂದಿರುವ ಅತ್ಯಾಧುನಿಕ ಬ್ರಹ್ಮೋಸ್ ಸೂಪರ್ ಸಾನಿಕ್ ಸೇರಿದಂತೆ ಹಲವು ಆಧುನಿಕ ಶಸ್ತ್ರಾಸ್ತ್ರಗಳು ಇದರಲ್ಲಿವೆ.
- ನೌಕೆಯು 70-ಕಿಮೀ MRSAM (ಮಧ್ಯಮ-ಶ್ರೇಣಿಯ ಮೇಲ್ಮೈಯಿಂದ ಗಾಳಿಗೆ ಹಾರಿಸಬಲ್ಲ ಕ್ಷಿಪಣಿ) ವ್ಯವಸ್ಥೆ, ಟಾರ್ಪಿಡೊ ಮತ್ತು ರಾಕೆಟ್ ಲಾಂಚರ್‌ಗಳು ಮತ್ತು ವಿಭಿನ್ನ ಗನ್ ವ್ಯವಸ್ಥೆಗಳನ್ನೂ ಹೊಂದಿದೆ.
- 163 ಮೀಟರ್ ಉದ್ದವಾಗಿದ್ದು 17 ಮೀಟರ್ ಅಗಲವಾಗಿದೆ, 7,400 ಟನ್‌ಗಳನ್ನು ಸಾಗಿಸಬಲ್ಲ ಸಾಮರ್ಥ್ಯವಿದ್ದು ಭಾರತದಲ್ಲಿ ನಿರ್ಮಿಸಲಾದ ಅತ್ಯಂತ ಶಕ್ತಿಶಾಲಿ ಯುದ್ಧನೌಕೆಗಳಲ್ಲಿ ಒಂದಾಗಿದೆ.
- ನಾಲ್ಕು ಶಕ್ತಿಶಾಲಿ ಅನಿಲ ಟರ್ಬೈನ್‌ಗಳಿಂದ ಹಡಗು ಚಾಲಿತವಾಗಿದ್ದು ಗಂಟೆಗೆ 30 ನಾಟಿಕಲ್ ಮೈಲು ವೇಗದಲ್ಲಿ ಕ್ರಮಿಸಬಲ್ಲುದು.
- ಇದು ಪರಮಾಣು, ಜೈವಿಕ ಮತ್ತು ರಾಸಾಯನಿಕ (ಎನ್‌ಬಿಸಿ) ಯುದ್ಧದ ಪರಿಸ್ಥಿತಿಗಳಲ್ಲಿ ಹೋರಾಡಲು ಸಜ್ಜುಗೊಂಡಿದೆ ಮತ್ತು ಆಧುನಿಕ ಗನ್ನರಿ ಶಸ್ತ್ರಾಸ್ತ್ರ ವ್ಯವಸ್ಥೆಗಳಿಗೆ ಗುರಿಯಿಡಲು ಅಗತ್ಯವಿರುವ ನಿಖರ ಡೇಟಾವನ್ನು ಒದಗಿಸುತ್ತದೆ.
- ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರಾಕೆಟ್ ಲಾಂಚರ್‌ಗಳು, ಟಾರ್ಪಿಡೊ ಲಾಂಚರ್‌ಗಳು ಮತ್ತು ASW ಹೆಲಿಕಾಪ್ಟರ್‌ಗಳು ಹಡಗಿಗೆ ಜಲಾಂತರ್ಗಾಮಿ ವಿರೋಧಿ ಯುದ್ಧ ಸಾಮರ್ಥ್ಯಗಳನ್ನು ಒದಗಿಸುತ್ತವೆ.