ಸಾಬೂದಾನಾ ಸೂಪರ್ ಫುಡ್ ಅಂದುಕೊಂಡಿದ್ದೀರಾ? ತಡೀರಿ, ಓದಿ ಇದನ್ನು

ಹೊಸ ದಿಗಂತ ಡಿಜಿಟಲ್ ಡೆಸ್ಕ್
ಸಾಬೂದಾನಾ ಅಥವಾ ಸಾಬಕ್ಕಿಯನ್ನು ಉಪವಾಸದ ದಿನದ ಆಹಾರವಾಗಿ ಹೆಚ್ಚಿನವರು ಸೇವಿಸುತ್ತಾರೆ. ದಕ್ಷಿಣ ಭಾಗಕ್ಕಿಂತ, ಭಾರತದ ಉತ್ತರ ಭಾಗದಲ್ಲಿ ಉಪವಾಸದ ಸಂದರ್ಭದಲ್ಲಿ ಇದರ ಬಳಕೆ ಹೆಚ್ಚು.
ಇದು ಆರೋಗ್ಯಕಾರಿ, ರಕ್ತದೊತ್ತಡದ ಮೇಲೆ ಪರಿಣಾಮಕಾರಿ ಎಂದೆಲ್ಲ ಪ್ರಯೋಜನಗಳನ್ನು ಹೇಳಲಾಗುತ್ತದೆ.
ಆದರೆ, ಹಿಂದುಸ್ತಾನ್ ಟೈಮ್ಸ್ ಗೆ ಬರೆದಿರುವ ಲೇಖನವೊಂದರಲ್ಲಿ, ಡಾ. ನಂದಿತಾ ಐಯರ್ ಎಂಬುವವರು ಈ ಎಲ್ಲ ಗ್ರಹಿಕೆಗಳನ್ನೂ ಪ್ರಶ್ನಿಸಬೇಕಾದ ಅಗತ್ಯ ಇದೆ ಎಂದಿದ್ದಾರೆ. ಅವರು ಹೇಳಿರೋದು “ಸಾಬೂದಾನಾ ನಮ್ಮ ಸಾಂಪ್ರದಾಯಿಕ ಆಹಾರ ಎನ್ನುವಂತೆಯೂ ಇಲ್ಲ. ಭಾರತದಲ್ಲಿ ಇದರ ಮೊದಲ ಸಂಸ್ಕರಣಾ ಕಾರ್ಖಾನೆ ಶುರುವಾಗಿದ್ದು 1943ರಲ್ಲಷ್ಟೆ. ಬಹಳಷ್ಟು ಮಂದಿ ಇದು ಸಸ್ಯದಿಂದ ಬರುವ ಒಂದು ರೀತಿಯ ಧಾನ್ಯ ಎಂದುಕೊಂಡಿದ್ದಾರೆ. ಆದರೆ ಇದು ಗೆಡ್ಡೆಯ ಪುಡಿಯಿಂದ ಬರುವಂಥದ್ದು. ಸಾಬೂದಾನಾ ಪಡೆಯುವ ಪ್ರಕ್ರಿಯೆಯಲ್ಲಿ ಸಲ್ಫರಿಕ್ ಆಮ್ಲ, ಪ್ರಾಸ್ಪರಿಕ್ ಆಮ್ಲ ಮತ್ತು ಬ್ಲೀಚ್ ಇತ್ಯಾದಿ ರಾಸಯನಿಕಗಳನ್ನು ಉಪಯೋಗಿಸಲಾಗುತ್ತದೆ. ಹೀಗಾಗಿ ಸಂಸ್ಕರಿತ ಆಹಾರದಲ್ಲಿರಬಹುದಾದ ಎಲ್ಲ ಆರೋಗ್ಯಕ್ಕೆ ಸವಾಲಾಗುವ ಅಂಶಗಳೂ ಇಲ್ಲಿಯೂ ಇರುತ್ತವೆ” ಎಂದಿದ್ದಾರವರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!