STORY | ಸಕ್ಕರೆ ಡಬ್ಬಿ ಮೇಲೆ ಕೂರೋಕ್ಕಿಂತ ಮುಂಚೆ ಇನ್ನೊಂದ ಸಲ ಯೋಚ್ನೆ ಮಾಡಿ!

ಒಂದ್ ದಿನ ಇಲಿ ದಿನಸಿ ಅಂಗಡಿಗೆ ಹೋಗಿತ್ತು. ರಾತ್ರಿ ತಿನ್ನೋಕ್ ಆಹಾರ ಹುಡುಕ್ತಾ ಹುಡುಕ್ತಾ ಸಕ್ಕರೆ ಡಬ್ಬಿ ನೋಡ್ತು. ಆ ಡಬ್ಬಿ ತೂತ ಮಾಡಿ ಡಬ್ಬಿ ಒಳಗೆ ನಿಂತ್ಕೋತು. ಆನಂದವೋ ಆನಂದ, ಏನೂ ಸಿಗ್ತಾ ಇರ್ಲಿಲ್ಲ. ಅಂತದ್ರಲ್ಲಿ ಸಕ್ರೆ ಸಿಕ್ಕಿದೆ ಅಂತ ಖುಷಿಲೀ ತಿನ್ನೋಕ್ ಶುರು ಮಾಡ್ತು.

ಸಕ್ಕರೆ ತಿನ್ತಾ ತಿನ್ತಾ ಹಗಲು ರಾತ್ರಿ ಯಾವ್ದು ಅಂತನೂ ಗೊತ್ತಾಗ್ಲಿಲ್ಲ. ಸಕ್ಕರೆ ಖಾಲಿ ಆಗ್ತಾ ಆಗ್ತಾ ಇಲಿನೂ ಕೆಳಕ್ ಬರ್ತಾ ಇತ್ತು. ತಿನ್ನೋ ಖುಷಿಲಿ ತಾನೂ ಸಕ್ಕರೆ ಜೊತೆ ಬಾಟ್ಲಿ ಒಳಗೆ ಸಿಕ್ ಹಾಕ್ಕೋತಿದಿನಿ ಅಂತ ಅದಿಕ್ ಗೊತ್ತೇ ಆಗ್ಲಿಲ್ಲ. ಒಂದಿನ ಸಕ್ಕರೆ ಕಡೆ ಕಾಳು ತಿಂದು ತೇಗ್ತು.

ತಿಂದು ಮಲ್ಕೊಂಡು ಹೊಟ್ಟೆ ಮೇಲೆ ಕೈ ಆಡಿಸ್ತಾ ಮೇಲ್ ನೋಡ್ತು. ಅಬ್ಬಾ ನಾನ್ ಕೆಳಗ್ ಇದಿನಿ, ಈ ಡಬ್ಬಿಯಿಂದ ಹೊರಗ್ ಬರಕ್ ಆಗಲ್ಲ ನಂಗೆ ಅಂತ ಗೊತ್ತಾಯ್ತು. ಆದ್ರೆ ಈಗ ಬೇರೆ ದಾರಿನೇ ಇಲ್ಲ. ಸಾಯೋವರ್ಗೂ ಅಲ್ಲೇ ಇರ್ಬೇಕು. ಊಟನೂ ಅಷ್ಟೆ, ತನ್ನಿಷ್ಟದ್ ಹಾಗ್ ಇರೋಕಾಗಲ್ಲ, ಜಗತ್ ನೋಡೋಕಾಗಲ್ಲ, ಬೇರೆ ಅವ್ರು ಹಾಕಿದ್ ಊಟ ತಿನ್ಬೇಕು, ಹಾಕಿಲ್ಲ ಅಂದ್ರೆ ತೆಪ್ಪಗ್ ಇರ್ಬೇಕು, ಯಾವ್ ಊಟ ಕೊಡ್ತಾರೆ ಅಂತ ಆಯ್ಕೆ ಮಾಡೋ ಹಾಗಿಲ್ಲ! ಇಲಿ ಸಾಯೋವರ್ಗೂ ಇದೇ ರೀತಿ ಜೀವನ ಮಾಡ್ತು.

ಈ ಇಲಿ ನೀವಾಗ್ಬೇಡಿ. ಜೀವನದಲ್ಲಿ ಶಾರ್ಟ್ ಕಟ್ ತುಂಬಾನೇ ಖುಷಿ ಕೊಡತ್ತೆ, ಎಲ್ಲಾನೂ ಗೆದ್ದೆ ಅಂತ ಹೇಳ್ಕೊಡತ್ತೆ. ಆದ್ರೆ ಎಲ್ಲಿವರ್ಗೂ? ಅಲ್ಪಕಾಲದ ಸುಖ ಬಯಸಿದರೆ ಕೊನೆವರೆಗೂ ಅಡ್ಜಸ್ಟ್ ಮಾಡ್ಕೊಂಡು, ಅವ್ರಿವ್ರ ಹಂಗಿನಲ್ಲಿ ಬದುಕಬೇಕಾದೀತು. ರಸ್ತೆ ಉದ್ದವಾದ್ರೂ ಬೇಜಾರಿಲ್ಲ, ಎಷ್ಟೇ ಗುಂಡಿಗಳು ಬಂದ್ರೂ ನೋವಿಲ್ಲ. ಆ ಕ್ಷಣ ಅನುಭವಿಸಿ ಮುಂದೆ ಹೋಗಿ, ಅಲ್ಲಿ ಒಂದೊಳ್ಳೆ ಜಾಗ ನಿಮಗಾಗಿ ಕಾದಿರುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!