ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿ.22ರಂದು ಬೆಂಗಳೂರಿನ ಗಿರಿನಗರ ಬಡವಾಣೆಯಲ್ಲಿರುವ ವಿಜಯಭಾರತಿ ವಿದ್ಯಾಲಯದಲ್ಲಿ ಶ್ರೀ ವಿಶ್ವೇಶ ತೀರ್ಥರ ಮೂರನೇ ವರ್ಷದ ಆಚರಣೆ ಸಂಪನ್ನವಾಯಿತು. ಶ್ರೀ ವಿಶ್ವಪ್ರಸನ್ನ ತೀರ್ಥರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ನಂತರದಲ್ಲಿ ಮಕ್ಕಳಿಗೆ ಉಪದೇಶ ನೀಡಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹರಿದಾಸಭಟ್ಟರು ಮತ್ತು ಗುರುರಾಜಾರ್ಯರು ವಿಶ್ವೇಶ ತೀರ್ಥರ ಸಾಮಾಜಿಕ ಕಳಕಳಿಗಳ ಕುರಿತು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಭಗವದ್ಗೀತೆಯನ್ನು ಪಠಿಸಿದರು. ಪ್ರತಿಭಾನ್ವಿತ ಮಕ್ಕಳಿಗೆ ಶ್ರೀಗಳಿಂದ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಆರಾಧನೆಯ ಸಂದರ್ಭದಲ್ಲಿ ಸ್ವಾಮೀಜಿಗಳು, ಶಾಲೆಯ ಸಿಬ್ಬಂದಿಗಳ ಅಚ್ಚುಕಟ್ಟುತನವನ್ನು ಶ್ಲಾಘಿಸಿದರು ಮತ್ತು ಶ್ರೀ ವಿಶ್ವೇಶ ತೀರ್ಥರ ಸವಿನೆನಪಿಗಾಗಿ ಎಲ್ಲಾ ಸಿಬ್ಬಂದಿಗಳಿಗೆ ಬೆಳ್ಳಿ ನಾಣ್ಯ ವಿತರಿಸಿದರು. ಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ