ಶ್ರೀಮನ್ಯಾಯ ಸುಧಾಮಂಗಳ ಮಹೋತ್ಸವ ಮೂರನೇ ದಿನ: ಪವಿತ್ರ ಕಾಗಿಣಾ ನದಿಯಲ್ಲಿ ಅವಗಾಹನ ಸ್ನಾನ

ಹೊಸದಿಗಂತ ವರದಿ,ಕಲಬುರಗಿ(ಮಳಖೇಡ):

ಜಿಲ್ಲೆಯ ಸೇಡಂ ತಾಲೂಕಿನ ಕಾಗಿಣಾ ನದಿ ತೀರದ ಮಳಖೇಡ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀ ಮನ್ನ್ಯಾಯಸುಧಾ ಮಂಗಳೋತ್ಸವದ ಮೂರನೇ ದಿನ ಶನಿವಾರ ಬ್ರಾಹ್ಮಿ ಮಹೂರ್ತದಲ್ಲಿ ಉತ್ತರಾಧಿ ಮಠದ ಶ್ರೀ ಸತ್ಯಾತ್ಮತೀರ್ಥರು ಕಾಗಿಣಾ ನದಿಯಲ್ಲಿ ಬ್ರಾಹ್ಮೀ ಮುಹೂರ್ತ ದಲ್ಲಿ ಅವಗಾಹನ ಸ್ನಾನ ಮುಗಿಸಿದರು.

ಬೆಳಗ್ಗೆ ಶ್ರೀ ಜಯತೀರ್ಥರ ಮೂಲ ಬೃಂದಾವನಕ್ಕೆ ಶ್ರೀಪಾದಂಗಳವರು ನಿಮ೯ಲ್ಯ ಅಭಿಷೇಕ ಪೂರೈಸಿದರು. ಬೆಳಿಗ್ಗೆ 6 ಗಂಟೆಗೆ ಶ್ರೀ ಮೂಲ ಸೀತಾ ಸಮೇತ ಶ್ರೀ ಮೂಲ ರಾಮ ದೇವರ ಪೂಜೆಯನ್ನು ಬಂಗಾರದ ಮತ್ತು ವಜ್ರದ ಮಂಟಪದಲ್ಲಿ ನೆರವೆರಿಸಲಾಯಿತು.

ನಂತರ ಬೆಳಿಗ್ಗೆ 8-30ಕ್ಕೆ ಶ್ರೀ ಜಯತೀರ್ಥ, ರ ಮೂಲದ ಬೃಂದಾವನಕ್ಕೆ ಪಂಚಾಮೃತ ಅಭಿಷೇಕಾದಿ ಪೂಜೆ ಸಲ್ಲಿಸಲಾಯಿತು.

ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀಥ೯ರು, ಶ್ರೀ ಕೂಡ್ಲಿ ಆಯ೯ ಅಕ್ಷೋಭ್ಯ ತೀಥ೯ರ ಮಠಾಧೀಶರಾದ ಶ್ರೀ ರಘುವಿಜಯ ತೀಥ೯ರು, ಶ್ರೀ ಚಿತ್ತಾಪುರ ಮಠಾಧೀಶರಾದ ಶ್ರೀ ವಿದ್ಯೇಂದ್ರ ತೀಥ೯ರು, ಶ್ರೀ ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀಥ೯ರು, ಶ್ರೀ ಸೋಸಲೆ ವ್ಯಾಸರಾಜರ ಮಠಾಧೀಶರಾದ ಶ್ರೀ ವಿದ್ಯಾಶ್ರೀಶ್ ತೀಥ೯ರು, ಶ್ರೀ ಭೀಮನ ಕಟ್ಟೆ ಮಠಾಧೀಶರಾದ ಶೀ ರಘುವೇಂದ್ರ ತೀಥ೯ರು ತಮ್ಮ ತಮ್ಮ ಪಟ್ಟದ ದೇವರ ಪೂಜೆಯನ್ನು ನೆರವೆರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!