ಇದೇ ತಿಂಗಳಲ್ಲಿ ‘ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ’ ಯಾತ್ರೆಯ ಮೂರನೇ ಟ್ರಿಪ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಭಾರತ್ ಗೌರವ್ ಕಾಶಿ ದರ್ಶನ ಯಾತ್ರೆಯ ಎರಡು ಟ್ರಿಪ್ ಈಗಾಗಲೇ ಮುಗಿದಿದ್ದು, ಫೆ.21ರಿಂದ ಮೂರನೇ ಟ್ರಿಪ್ ಆರಂಭವಾಗಲಿದೆ.

ಉತ್ತರ ಭಾರತದಲ್ಲಿ ತೀವ್ರ ಚಳಿ ಕಾರಣದಿಂದ ಮುಂದೂಡಲಾಗಿದ್ದ ಟ್ರಿಪ್‌ಗೆ ಧಾರ್ಮಿಕ ದತ್ತಿ ಇಲಾಖೆ ಇದೀಗ ತಯಾರಾಗಿದೆ. ಈ ಬಗ್ಗೆ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಮಾಹಿತಿ ನೀಡಿದ್ದು, ಫೆ.21ರಂದು ಮೂರನೇ ಟ್ರಿಪ್‌ಗೆ ದಿನಾಂಕ ನಿಗದಿಪಡಿಸಲಾಗಿದೆ. ಎಂಟು ದಿನಗಳ ಟ್ರಿಪ್ ಇದಾಗಿದ್ದು, ವಾರಣಾಸಿ, ಅಯೋಧ್ಯೆ ಹಾಗೂ ಪ್ರಯಾಗ್‌ರಾಜ್ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ನಂತರ ಬೆಂಗಳೂರಿಗೆ ವಾಪಾಸಾಗಲಿದೆ ಎಂದಿದ್ದಾರೆ.

ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ಭಾರತ್ ಗೌರವ್ ರೈಲನ್ನು ಆರಂಭಿಸಿದ ಹೆಗ್ಗಳಿಕೆ ಕರ್ನಾಟಕದ್ದು. ಯಾತ್ರಾರ್ಥಿಗಳಿಗಾಗಿ ಊಟ, ಉಪಹಾರ, ತಂಗುವ ಸ್ಥಳ, ತುರ್ತು ವೈದ್ಯಕೀಯ ಸೇವೆ ವ್ಯವಸ್ಥೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!