ಇದು 16ನೇ ಶತಮಾನದ ನಿಶ್ಚಿತಾರ್ಥದ ಉಂಗುರ! ಯೂನಿಕ್‌ ಡಿಸೈನ್‌ಗೆ ಮಾರುಹೋಗದವರಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜರ್ಮನಿಯ 16 ನೇ ಶತಮಾನದ ನಿಶ್ಚಿತಾರ್ಥದ ಉಂಗುರ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಯಾಕಂದರೆ ಈ ಉಂಗುರ ಸಾಮಾನ್ಯ ಉಂಗುರದಂತಿಲ್ಲ ಬದಲಿಗೆ ಮಿನಿ ಖಗೋಳ ನಕ್ಷೆ ವಿನ್ಯಾಸವನ್ನು ಹೊಂದಿದೆ. ಹೀಗೆ ಈ ಉಂಗುರದ ಕುರಿತ ಪೋಸ್ಟ್ ಟ್ವಿಟ್ಟರ್ ನಲ್ಲಿ ವೈರಲ್ ಆಗುತ್ತಿದೆ.

ನಿಶ್ಚಿತಾರ್ಥದ ಉಂಗುರಗಳು ಯಾವಾಗಲೂ ದಂಪತಿಗೆ ವಿಶೇಷವಾಗಿರುತ್ತವೆ. ಅದರಲ್ಲೂ ಈಗೀಗ ನಿಶ್ಚಿತಾರ್ಥದ ಉಂಗುರ ವಜ್ರದ್ದೇ ಆಗಬೇಕು ಎಂಬ ಡಿಮ್ಯಾಂಡ್‌ ಹೆಚ್ಚಿದೆ. ಪ್ರಿನ್ಸೆಸ್ ಕಟ್ಸ್, ಓವಲ್ ಕಟ್ಸ್, ಕುಶನ್ ಈ ಉಂಗುರಗಳ ಸೊಗಸಾದವಾಗಿವೆ. ಅದರಂತೆ 16 ನೇ ಶತಮಾನದ ಈ ನಿಶ್ಚಿತಾರ್ಥದ ಉಂಗುರಕ್ಕೂ ಒಂದು ಅರ್ಥವಿದೆ.

ʻಇಡೀ ಜಗತ್ತೇ ತಾನು ಪ್ರೀತಿಸುವ ವ್ಯಕ್ತಿಯ ಕೈಯಲ್ಲಿದೆʼ ಎಂಬಂತೆ ಈ ಉಂಗುರವನ್ನು ವಿನ್ಯಾಸಗೊಳಿಸಲಾಗಿದೆ. ಪೋಸ್ಟ್‌ಗೆ 1.52 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಮತ್ತು ಪ್ರತಿಕ್ರಿಯೆಗಳು ಬಂದಿವೆ. ದುಬಾರಿ ಸಾಲಿಟೇರ್ ಗಳಿಗಿಂತಲೂ ಹೆಚ್ಚು ಅರ್ಥಪೂರ್ಣ ಮತ್ತು ಉತ್ತಮವಾಗಿದ್ದು, ಒಟ್ಟಾರೆ ಈ ರಿಂಗ್ ಸೂಪರ್ಬ್ ಎಂದು ಹೊಗಳುತ್ತಿದ್ದಾರೆ. ಈ ಉಂಗುರವನ್ನು ಪ್ರೀತಿಯ ಪರಿಪೂರ್ಣ ಸಂಕೇತವೆಂದು ಹೇಳಲಾಗುತ್ತದೆ. ಈ ಉಂಗುರವನ್ನು ನೋಡಿದ ಕೂಡಲೇ ಎಂಥವರೂ ತಮ್ಮ ಪ್ರೀತಿಯನ್ನು ಅಂಗೀಕರಸದೆ ಇರಲಾರರು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!