ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಣ್ಬೀರ್ ಕಪೂರ್, ನಟಿ ಸಾಯಿ ಪಲ್ಲವಿ ಹಾಗೂ ಯಶ್ ಅಭಿನಯದ ಬಹುನಿರೀಕ್ಷಿತ ರಾಮಾಯಣ ಸಿನಿಮಾಗೆ ಮತ್ತೊಬ್ಬ ನಟಿ ಎಂಟ್ರಿಯಾಗಲಿದ್ದಾರೆ.
ನಟ ರಣ್ಬೀರ್ ಕಪೂರ್, ನಟಿ ಸಾಯಿ ಪಲ್ಲವಿ ಹಾಗೂ ಯಶ್ ಅಭಿನಯದ ಬಹುನಿರೀಕ್ಷಿತ ರಾಮಾಯಣ ಸಿನಿಮಾಗೆ ಮತ್ತೊಬ್ಬ ನಟಿ ಎಂಟ್ರಿಯಾಗಲಿದ್ದಾರೆ.
ನ್ಯಾಷನಲ್ ಸ್ಟಾರ್ ಯಶ್ ಸಹ ನಿರ್ಮಾಪಕನಾಗಿ ಕೈಜೋಡಿಸಿರುವ ‘ರಾಮಾಯಣ’ ಸಿನಿಮಾತಂಡ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ. ರಾವಣನ ಪಾತ್ರದಲ್ಲಿ ಯಶ್ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ರಾವಣನ ಸಹೋದರಿಯ ಪಾತ್ರಕ್ಕೆ ನಟಿ ರಾಕುಲ್ ಪ್ರೀತ್ ಆಯ್ಕೆಯಾಗಿದ್ದಾರೆ.
ಶೂರ್ಪನಖಿ ಪಾತ್ರದಲ್ಲಿ ರಾಕುಲ್ ನಟನೆ ಮಾಡಲಿದ್ದು, ಸಿನಿ ತಂಡದ ಜೊತೆ ಕೈ ಜೋಡಿಸಿದ್ದಕ್ಕೆ ಖುಷಿ ಇದೆ ಎಂದು ಹೇಳಿಕೊಂಡಿದ್ದಾರೆ.