ಮೇಘನಾ ಶೆಟ್ಟಿ,ಶಿವಮೊಗ್ಗ
ಅಡುಗೆ ಮನೆಯಲ್ಲಿ ನಮ್ಮದೇ ಕೈ ತಾಗಿ ತಟ್ಟೆ ಬಿದ್ದರೂ, ಬೈಯೋದು ತಟ್ಟೆ ಅಲ್ಲಿ ಇಟ್ಟವರನ್ನ!
ತಟ್ಟೆ ಇಲ್ಲಿ ಯಾರು ಇಟ್ಟಿದ್ದು, ಇಲ್ಲಿ ಇಡಬಾರದು ಗೊತ್ತಾಗಲ್ವಾ? ಎಂದು ದೊಡ್ಡ ದನಿಯಲ್ಲಿ ರೇಗೋದು ಮಾಮೂಲಿ..
ತಮ್ಮ ದುಡ್ಡು ಕದ್ದು ಸಿಕ್ಕಿಬಿದ್ದಾಗ, ಅಕ್ಕ ಹೇಳಿದ್ದಕ್ಕೆ ಕದ್ದೆ ಎಂದು ಹೇಳಿ ಎಸ್ಕೇಪ್ ಆಗೋದು, ಗೀಝರ್ ಆಫ್ ಮಾಡದೇ ಬಂದೆ ಎಂದು ಹೆಂಡತಿ ಮೇಲೆ ರೇಗಿದಾಗ, ನೀವು ನನಗೆ ಟೆನ್ಶನ್ ಕೊಟ್ರಿ, ಆ ಟೆನ್ಶನ್‌ನಲ್ಲಿ ಆಫ್ ಮಾಡೋದು ಮರೆತೆ ಎಂದು ಗಂಡನನ್ನು ದೂರೋದು..
ಮಾರ್ಕ್ಸ್ ಯಾಕೆ ಕಡಿಮೆ ಬಂದಿದೆ ಎಂದು ಗದರಿದಾಗ, ನೀವು ಟಿವಿ ಹಾಕಿದ್ರಿ ಓದೋಕಾಗಿಲ್ಲ ಎಂದು ಹೇಳುವ ಮಕ್ಕಳು… ಹೀಗೆ ತಮ್ಮ ತಪ್ಪನ್ನು ತಪ್ಪು ಎಂದು ಒಪ್ಪಿಕೊಳ್ಳೋರು ಬಹಳ ಕಡಿಮೆ, ಒಪ್ಪಿಕೊಂಡರೂ ಆದರೆ ಅನ್ನೋ ಪದಬಳಕೆ ಇದ್ದೇ ಇರುತ್ತದೆ. ಬೇರೆಯವರನ್ನು ನಮ್ಮ ತಪ್ಪಿಗೆ ಹೊಣೆ ಮಾಡೋದ್ಯಾಕೆ?
- ತಪ್ಪಾಗಿದ್ದು ಯಾಕೆ ಎಂದು ಹೇಳೋದಕ್ಕೆ, ಹೌದು, ಇದು ಹ್ಯೂಮನ್ ಬಿಹೇವಿಯರ್. ನನ್ನ ತಪ್ಪಾಯ್ತು ಎಂದು ಅಲ್ಲಿಗೇ ಸೆಂಟೆನ್ಸ್ ಕೊನೆ ಮಾಡೋದು ತುಂಬಾ ಕಷ್ಟ, ತಪ್ಪು ಯಾಕೆ ಆಯ್ತು ಎಂದು ಹೇಳಬೇಕು, ಬೇರೆಯವರ ಅಥವಾ ಬೇರೆ ವಸ್ತುಗಳ ಮೇಲೆ ತಪ್ಪನ್ನು ಹೊರಿಸಲೇಬೇಕು.
- ಬೇರೆಯವರ ಮೇಲೆ ಅಟ್ಯಾಕ್ ಮಾಡೋದಕ್ಕೆ. ಹೌದು, ನಮಗಿಷ್ಟದ ವ್ಯಕ್ತಿಯಾಗಿರಲಿ, ಇಷ್ಟವಿಲ್ಲದವರಿರಲಿ, ನಮ್ಮ ತಪ್ಪುಗಳನ್ನು ಅವರ ಮೇಲೆ ಹಾಕಿ, ಅವರ ತಪ್ಪುಗಳನ್ನು ಎತ್ತಿ ತೋರಿಸಬೇಕು, ಎಲ್ಲರೂ ಇದನ್ನು ಮಾಡುತ್ತಾರೆ ಎಂದು ಹೇಳೋಕಾಗೋದಿಲ್ಲ, ಇದು ನಮ್ಮ ಆಯ್ಕೆ.
- ಎಸ್ಕೇಪ್ ಆಗೋದಕ್ಕೆ. ಸದ್ಯದ ಪರಿಸ್ಥಿತಿಯಿಂದ ಎಸ್ಕೇಪ್ ಆಗಬೇಕಲ್ವಾ? ಆಗ ತಪ್ಪನ್ನು ಇನ್ನೊಬ್ಬರ ಮೇಲೆ ಅಥವಾ ಇನ್ನೊಂದು ವಸ್ತುವಿನ ಮೇಲೆ ಹಾಕೋದು. ನೀರಿನ ಬಾಟಲಿ ಯಾಕೆ ಬೀಳಿಸ್ದೆ ಅಂದ್ರೆ ತುದೀಲಿ ಇತ್ತು, ನನ್ ಪಾಡಿಗೆ ನಾನು ಈ ಕಡೆ ತಿರುಗ್ದೆ, ಅದು ಅದಾಗೆ ಬಿತ್ತು ಎಂದು ಹೇಳೋದು.
- ನಮ್ಮನ್ನು ನಾವು ಬಚಾವ್ ಮಾಡಿಕೊಳ್ಳೋ ಸುಲಭ ವಿಧಾನ. ಇದು ನಿಮಗೆ ಗೊತ್ತಿರದೇ ಆಗೋದು, ಪರ್ಸ್‌ನಲ್ಲಿದ್ದ ಸರ ಕಳೆದು ಹೋದ್ರೆ, ಅದನ್ನು ಪರ್ಸ್‌ನಲ್ಲಿ ಇಡೋಕೆ ಇವರೇ ಹೇಳಿದ್ದು ಎಂದು ಎಸ್ಕೇಪ್ ಆಗಿ ಬಿಡ್ತೀರಿ. ಪರ್ಸ್‌ನಲ್ಲಿ ಇಟ್ಟಿದ್ದು ನೀವೇ ಅಲ್ವಾ? ನಿಮ್ಮ ಕೈಲಿದ್ದ ಪರ್ಸ್ ನಿಮ್ಮದೇ ಜವಾಬ್ದಾರಿ ಅಲ್ವಾ?
- ಇನ್ನೊಬ್ಬರ ಮೇಲೆ ಗೂಬೆ ಕೂರಿಸೋದು ಅತಿ ಸುಲಭವಾದ ಆಪ್ಷನ್, ನಾನು ಇನೋಸೆಂಟ್ ಬೇರೆಯವರಿಂದ ತಪ್ಪಾಗಿದೆ ಎಂದು ತೋರಿಸೋದು ಸುಲಭವಾದ ಆಪ್ಷನ್ ಅಲ್ವಾ?