ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿ ಬಿಗ್‌ಬಾಸ್‌ನಲ್ಲಿ ಹಿಂದೆಂದೂ ನಡೆಯದ ಘಟನೆ ನಡೆದಿದೆ. ಬಿಗ್‌ಬಾಸ್ ಮನೆಯಲ್ಲಿ ನಟಿ ಅಂಕಿತಾ ಲೋಖಂಡೆ ಪ್ರೆಗ್ನೆಂಟ್ ಎನ್ನುವ ವಿಷಯ ತಿಳಿದುಬಂದಿದ್ದು, ಮನೆಗೆ ಹೋಗ್ತೇನೆ ಎಂದು ಅಂಕಿತಾ ಕೇಳಿಕೊಂಡಿದ್ದಾರೆ.
ಅಂಕಿತಾ ಹಾಗೂ ಪತಿ ವಿಕ್ಕಿ ಜೈನ್ ಕಪಲ್ ಆಗಿ ಶೋಗೆ ಎಂಟ್ರಿ ನೀಡಿದ್ದರು. ಇತ್ತೀಚೆಗಷ್ಟೇ ಅಂಕಿತಾ ಹುಳಿ ತಿನ್ನುವ ಆಸೆಯಾಗ್ತಿದೆ ಪದೇ ಪದೆ ವಾಂತಿ ಬರುತ್ತಿದೆ ಎಂದು ಹೇಳುತ್ತಿದ್ದರು.
ಇದೀಗ ರಕ್ತಪರೀಕ್ಷೆ ಮಾಡಿಸಿದ್ದು, ಅಂಕಿತಾ ಪ್ರೆಗ್ನೆಂಟ್ ಎನ್ನುವ ವಿಷಯ ಹೊರಬಿದ್ದಿದೆ.ಸದ್ಯದಲ್ಲೇ ಅಂಕಿತಾರನ್ನು ಮನೆಗೆ ಕಳಿಸುವ ಸಿದ್ಧತೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಈವರೆಗೂ ಬಿಗ್‌ಬಾಸ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಒಂಬತ್ತು ತಿಂಗಳ ನಂತರವೇ ಪ್ರೆಗ್ನೆನ್ಸಿ ಅನೌನ್ಸ್ ಮಾಡುತ್ತಾರೆ. ಆದರೆ ಅಂಕಿತಾ ಪ್ರೆಗ್ನೆಂಟ್ ಎನ್ನುವ ವಿಷಯ ಇಲ್ಲಿಯೇ ರಿವೀಲ್ ಆಗಿದೆ.