LOVE BETTER | ಯುವಕರನ್ನು ಬ್ರೇಕಪ್‌ನಿಂದ ಹೊರತರಿಸೋಕೂ ದುಡ್ಡಿಟ್ಟಿದೆ ಈ ದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುವಕರಿಗೆ ಬ್ರೇಕಪ್‌ನಿಂದ ಚೇತರಿಸಿಕೊಳ್ಳಲು ಸಹಾಯ ಮಾಡೋದಕ್ಕೆ ಈ ದೇಶ ಲವ್ ಬೆಟರ್ ಅಭಿಯಾನವನ್ನು ಪ್ರಾರಂಭಿಸಿದೆ.

ಇದಕ್ಕಾಗಿಯೇ ನ್ಯೂಜಿಲೆಂಡ್ ಸರ್ಕಾರ ನಾಲ್ಕು ಮಿಲಿಯನ್ ಡಾಲರ್‌ನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಲವ್ ಬ್ರೇಕಪ್ ಸಾಮಾನ್ಯ, ಇದು ಎಲ್ಲರಿಗೂ ನೋವುಂಟು ಮಾಡುತ್ತದೆ. ಆದರೆ ನೊಂದರೂ ಉತ್ತಮ ಜೀವನ ನಡೆಸುವುದು ಅವಶ್ಯವಾಗಿದೆ. ಈ ಮನೋಭಾವ ಬೆಳೆಸಿ ಯುವಕರು ದಾರಿ ತಪ್ಪದಂತೆ ಸರ್ಕಾರ ಯೋಜನೆ ರೂಪಿಸಿದೆ.

ಸುಮಾರು ನಾಲ್ಕು ಮಿಲಿಯನ್ ಡಾಲರ್ ಯೋಜಿತ ಬಜೆಟ್‌ನೊಂದಿಗೆ ಲವ್ ಬೆಟರ್ ಅಭಿಯಾನ ಮೂರು ವರ್ಷದಿಂದ ನಡೆಯುತ್ತಿದೆ. ಪ್ರೀತಿಯ ಬ್ರೇಕಪ್‌ನಿಂದ ಹೊರಬರೋಕೆ ಹಣ ಬೇಕಿದೆ ಎಂದು 1,200ಕ್ಕೂ ಹೆಚ್ಚು ಯುವಕರು ಮನವಿ ಸಲ್ಲಿಸಿದ್ದರು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!