September 27, 2026
Sunday, September 27, 2026
spot_img

ಲೇಟ್ ನೈಟ್ ಕ್ರೆವಿಂಗ್ಸ್ ಗೆ ಬೆಸ್ಟ್ ಈ ಕರ್ಡ್ ಪೀನಟ್ ಬೌಲ್: ಮಧ್ಯರಾತ್ರಿ ಹಸಿವಾದ್ರೆ ಇದನ್ನ ಟ್ರೈ ಮಾಡಿ

ರಾತ್ರಿ ಊಟದ ನಂತರವೂ ಏನಾದರೂ ತಿನ್ನಬೇಕು ಅನ್ನಿಸುವುದು ಸಾಮಾನ್ಯ. ಅಂತಹ ಸಮಯದಲ್ಲಿ ಹೆಚ್ಚು ಎಣ್ಣೆ, ಸಕ್ಕರೆ ಅಥವಾ ಜಂಕ್ ಫುಡ್ ಬದಲು ಪ್ರೋಟೀನ್ ಮತ್ತು ಫೈಬರ್ ಇರುವ ಲೈಟ್ ಸ್ನ್ಯಾಕ್ ಆಯ್ಕೆ ಮಾಡುವುದು ಉತ್ತಮ. ಇದಕ್ಕಾಗಿ ಈ ಕರ್ಡ್ ಪೀನಟ್ ಬೌಲ್ ಸುಲಭ ಆಯ್ಕೆ.

ಬೇಕಾಗುವ ಪದಾರ್ಥಗಳು

ಗಟ್ಟಿ ಮೊಸರು – ½ ಕಪ್
ಹುರಿದ ಕಡಲೆಕಾಯಿ – 1 ಟೀಸ್ಪೂನ್
ಚಿಯಾ ಸೀಡ್ಸ್ – 1 ಟೀಸ್ಪೂನ್
ಸೌತೆಕಾಯಿ – ಸ್ವಲ್ಪ ಸಣ್ಣ ತುಂಡುಗಳು
ಉಪ್ಪು – ಚಿಟಿಕೆ
ಮೆಣಸು ಪುಡಿ – ಸ್ವಲ್ಪ
ಹುರಿದ ಜೀರಿಗೆ ಪುಡಿ – ಸ್ವಲ್ಪ

ಮಾಡುವ ವಿಧಾನ

ಮೊದಲಿಗೆ ಒಂದು ಬೌಲ್‌ಗೆ ಅರ್ಧ ಕಪ್ ಮೊಸರು ಹಾಕಿ. ಅದಕ್ಕೆ ಸಣ್ಣದಾಗಿ ಕತ್ತರಿಸಿದ ಸೌತೆಕಾಯಿ, ಹುರಿದ ಕಡಲೆಕಾಯಿ ಮತ್ತು ಚಿಯಾ ಸೀಡ್ಸ್ ಸೇರಿಸಿ. ನಂತರ ಸ್ವಲ್ಪ ಉಪ್ಪು, ಮೆಣಸು ಹಾಗೂ ಹುರಿದ ಜೀರಿಗೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಇಷ್ಟೇ! 5 ನಿಮಿಷದಲ್ಲಿ ಲೈಟ್, ಕ್ರಂಚಿ ಮತ್ತು ಹೊಟ್ಟೆ ತುಂಬಿಸುವ ಸ್ನ್ಯಾಕ್ ಸಿದ್ಧ.

ಲೇಟ್ ನೈಟ್ ಕ್ರೆವಿಂಗ್ಸ್ ಗೆ ಯಾಕೆ ಒಳ್ಳೆದು?

ಮೊಸರಿನಿಂದ ಪ್ರೋಟೀನ್ ಸಿಗುತ್ತದೆ, ಕಡಲೆಕಾಯಿ ಆರೋಗ್ಯಕರ ಕೊಬ್ಬು ಮತ್ತು ಸ್ವಲ್ಪ ಪ್ರೋಟೀನ್ ನೀಡುತ್ತದೆ. ಸೌತೆಕಾಯಿ ಹಾಗೂ ಚಿಯಾ ಸೀಡ್ಸ್ ಫೈಬರ್ ಹೆಚ್ಚಿಸುತ್ತವೆ. ಹೀಗಾಗಿ ರಾತ್ರಿ ಸಿಹಿ ಅಥವಾ ಜಂಕ್ ಫುಡ್ ತಿನ್ನುವ ಬಯಕೆಯನ್ನು ನಿಯಂತ್ರಿಸಲು ಇದು ಸಹಾಯ ಮಾಡಬಹುದು.

Must Read