HEALTH TIPS| ಚಳಿಗಾಲದಲ್ಲಿ ಕೆಮ್ಮು ಮತ್ತು ನೆಗಡಿಗೆ ಈ ಕಷಾಯ ಪರಿಹಾರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಿನದಿಂದ ದಿನಕ್ಕೆ ಸೆಖೆ ಕಡಿಮೆಯಾಗುತ್ತಿದೆ..ಚಳಿ, ನಡುಕ ಈ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳು, ಸೋಂಕುಗಳೂ ಹೆಚ್ಚು. ಚಳಿಯಿಂದ ರಕ್ಷಿಸಿಕೊಳ್ಳಲು ಟೀ, ಕಾಫಿ ಕುಡಿಯುತ್ತಾರೆ. ಆದರೆ ಇವುಗಳ ಬದಲಾಗಿ ಕಷಾಯ ಸೇವಿಸಿದರೆ ಉತ್ತಮ ಫಲಿತಾಂಶ ದೊರೆಯುತ್ತದೆ. ಇದನ್ನು ಕುಡಿಯುವುದರಿಂದ ಶೀತದಿಂದ ಮುಕ್ತಿ ಸಿಗುತ್ತದೆ ಮತ್ತು ಆರೋಗ್ಯಕ್ಕೂ ಲಾಭವಾಗುತ್ತದೆ.

ಶುಂಠಿ, ಮೆಣಸು, ಚಕ್ಕೆ, ಪುದೀನಾ ಎಲೆಗಳು ಅಥವಾ ತುಳಸಿ ಎಲೆಗಳು, ಬೆಲ್ಲ, ಅರಿಶಿನವನ್ನು ಬಳಸಿ ಈ ಕಷಾಯ ತಯಾರಿಸಿದರೆ ಉತ್ತಮ ಪ್ರಯೋಜನಗಳನ್ನು ನೀಡುತ್ತದೆ.

ಮಾಡುವ ವಿಧಾನ

ಒಲೆ ಮೇಲೆ ಒಂದು ಪಾತ್ರೆಯಿಟ್ಟು ಅದಕ್ಕೆ ಸಾಕಷ್ಟು ನೀರು ಸೇರಿಸಿ ಶುಂಠಿ, ಮೆಣಸು, ಚಕ್ಕೆ ಎಲ್ಲವನ್ನು ಅರ್ಧಂಬರ್ಧ ಕುಟ್ಟಿ ಪುಡಿಮಾಡಿ ಹಾಕಿ. ಸ್ವಲ್ಪ ಸಮಯದ ಬಳಿಕ ಇದಕ್ಕೆ ಬೆಲ್ಲ, ಅರಿಶಿನ ಪುದೀನಾ ಎಲೆ ಹಾಕಿ ಅದರ ಘಮಲು ಮೂಗಿಗೆ ಬಡಿಯುವವರೆಗೆ ಕುದಿಸಿ. ನಂತರ ಸ್ಟವ್‌ ಆರಿಸಿ ಒಂದು ಲೋಟಕ್ಕೆ ಸೋಸಿ ಕುಡಿಯಿರಿ.

ಇದನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ನೆಗಡಿ, ಕೆಮ್ಮು, ಗಂಟಲು ಬೇನೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಜೀರ್ಣಕಾರಿ ಸಮಸ್ಯೆಗಳು ಕಡಿಮೆಯಾಗುತ್ತವೆ. ಇದು ನಮ್ಮ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!