ಇವರದ್ದು ಸಂಪೂರ್ಣ ನೈಸರ್ಗಿಕ ಉತ್ಪನ್ನಗಳ ಸಂಗಮ: ರೈತರು, ಬುಡಕಟ್ಟು ಜನರ ಬದುಕಾಗಿದೆ ಈ ನೆಕ್ಟರ್!

  • ಹಿತೈಷಿ

ಒಬ್ಬ ಹೆಣ್ಣು ಸಮಾಜ ಕೇಳುವ ಪ್ರತಿ ಪ್ರಶ್ನೆಗೆ ತನ್ನದೇ ರೀತಿಯಲ್ಲಿ ಉತ್ತರಿಸುತ್ತಾ ಬದುಕಬೇಕು. ಎಷ್ಟೋ ಹೆಣ್ಣುಮಕ್ಕಳು ಸ್ವಾವಲಂಬಿಯಾಗಲು ಕುಟುಂಬದಿಂದ ದೂರ ಬಂದು ಇಂದಿಗೂ ಹೋರಾಡುತ್ತಿರುವ ಉದಾಹರಣೆಗಳಿವೆ. ಆದರೆ ಈಕೆ ಕುಟುಂಬದೊಂದಿಗೆ ಇದ್ದು, ತನ್ನ ಕೆಲಸವನ್ನು ಇಡೀ ವಿಶ್ವವೇ ಗುರಿತುಸುಂತೆ ಮಾಡಿದ್ದಾರೆ.

ಇವರು ಕೊಡಗು ಮೂಲದ ಛಾಯಾ ನಂಜಪ್ಪ. ಈಕೆ ಮೊದಲ ತಲೆಮಾರಿನ ಗ್ರಾಮೀಣಾ ಮಹಿಳಾ ಉದ್ಯಮಿ. ಇವರದ್ದು ‘ನೆಕ್ಟರ್ ಫ್ರೆಶ್’ ಅನ್ನುವ ಒಂದು ನೈಸರ್ಗಿಕ ಉತ್ಪಾತನೆಗಳ ಸಂಗಮ.

Entrepreneur Chayaa Nanjappa On How Developing Good Business Ethics  Attracts Growth2007ರಲ್ಲಿ ಛಾಯಾ ಅವರು ಶ್ರೀರಂಗಪಟ್ಟಣದಲ್ಲಿ ಈ ನೆಕ್ಟರ್ ಫ್ರೆಶ್ ಉದ್ಯಮ ಪ್ರಾರಂಭಿಸಿದರು. ಇದು ಕೇವಲ ಆಕೆಯ ಸ್ವಾವಲಂಭನೆಯ ಬದುಕಾಗದೆ ಗ್ರಾಮೀಣ ಭಾಗದಲ್ಲಿನ ರೈತರು, ಬುಡಕಟ್ಟು ಜನರ ಜೀವನವಾಗಿದೆ ಎಂದರೆ ತಪ್ಪಾಗಲಾರದು.
ಇವರ ಕಾರ್ಯಕ್ಷಮತೆ ಹಾಗೂ ವಿಚಾರಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯದಿಂದ ಈಗ ನೆಕ್ಟರ್ ಫ್ರೆಶ್ ಆರಂಭಿಕ ಹಂತದಲ್ಲೇ ಹೆಚ್ಚು ಯಶಸ್ಸು ಗಳಿಸಿ ಈಗ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ.

ಕಳೆದ 2 ದಶಕಗಳಿಂದ ಅಂತಾರಾಷ್ಟ್ರೀಯ ಆಹಾರೋದ್ಯಮಿಗಳ ಕೈಲಿದ್ದ ಮಾರುಕಟ್ಟೆಯಲ್ಲಿ ಭಾರತೀಯ ಅಸ್ತಿತ್ವವನ್ನು ಪಡೆಯಬೇಕೆಂಬ ಕಲ್ಪನೆ ಈಗ ನನಸಾಗಿದೆ.

Exotic Coffee – Nectar Freshನೆಕ್ಟರ್ ಫ್ರೆಶ್ ಹೆಸರೇ ಹೇಳುವಂತೆ ಇಲ್ಲಿ ಪರಿಶುದ್ಧ ಜೇನುತುಪ್ಪ, ಕಾಫಿ ಪುಡಿ, ಜ್ಯಾಮ್, ಚಿಯಾ ಸೀಡ್, ಆಪಲ್ ಸೈಡರ್ ವೆನಿಗರ್ ಗಳನ್ನು ಉತ್ಪಾದಿಸಿ ಹಿಮಾಲಯಾ, ಐಟಿಸಿ, ಮೆಡ್ ಪ್ಲಸ್, ವಾಲ್ ಮಾರ್ಟ್ ನಂತಹ ಬೃಹತ್ ಸಂಸ್ಥೆಗಳಲ್ಲಿ ಈಗ ತಮ್ಮ ನೆಕ್ಟರ್ ಫ್ರೆಶ್ ಉತ್ಪಾದನೆಗಳು ಸಿಗುವಂತೆ ಶ್ರಮಿಸಿದ್ದು ಛಾಯಾ ನಂಜಪ್ಪ.

Busy bee – Outlook Business WoWಛಾಯಾ ಸ್ವಾವಲಂಬಿಯಾಗಿಯಾಗಿ ತಮ್ಮ ಉದ್ಯಮ ಪ್ರಾರಂಭಿಸಲು ಬೆನ್ನುಲುಬಾಗಿ ನಿಂತಿದ್ದು, ಆಕೆಯ ಪತಿ ಕುಪ್ಪಂಡ ರಾಜಪ್ಪ ಮುತ್ತಣ್ಣ.
ಗ್ರಾಮೀಣ ಭಾಗದ, ಉದ್ಯಮದ ಬಗ್ಗೆ ಯಾವುದೇ ಕುಶಲತೆ ಇಲ್ಲದ ತಂಡವನ್ನು ಬಲವಾಗಿ ನಿಲ್ಲಿಸಿ, ತನ್ನ ತಂಡಕ್ಕೆ ತರಬೇತಿ ನೀಡುತ್ತಾ ನೆಕ್ಟರ್ ಫ್ರೆಶ್ ಈಗ ಭಾರತದ ಹೈ ಎಂಡ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಪಡೆದುಕೊಂಡಿದೆ.

ಐಟಿಐ, ವಾಲ್ ಮಾರ್ಟ್ ಮಾತ್ರವಲ್ಲದೆ ಆಯುರ್ವೇದ ಮತ್ತು ಫಾರ್ಮಾ ಗಳಲ್ಲೂ ನೆಕ್ಟರ್ ಫ್ರೆಶ್ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿದೆ. ಇದು ಆಕೆಯ ಶಕ್ತಿ ಹಾಗೂ ಆಕೆ ಸಂಸ್ಥೆಯ ಆಧಾರ ಸ್ತಂಭವಾಗಿದ್ದಾಳೆ ಎಂದು ಹೇಳುತ್ತಾರೆ ಪತಿ ಕುಪ್ಪಂಡ ರಾಜಪ್ಪ ಮುತ್ತಣ್ಣ.

The Weekend Leader - Chayaa Nanjappa, Nectar Fresh, founder partner, makers  of honey, jams and sauces

ಪ್ರಾಡಕ್ಟ್:
ನೆಕ್ಟರ್ ಫ್ರೆಶ್ ನಲ್ಲಿ ಕೃಷಿ ಆಧಾರಿತ ಆಹಾರ ಉತ್ಪನ್ನಗಳಾದ ಕಾಫಿ ಸೇರಿದಂತೆ ಇತರೆ ಉತ್ತಮ ಗುಣಮಟ್ಟದ ಮಸಾಲೆಗಳ ವೈವಿಧ್ಯಗೊಂಡಿದೆ.
ಪ್ರಕೃತಿ, ಶಿಕ್ಷಣ ಪಡೆದ ಗ್ರಾಮೀಣ ಆಹಾರ ಉದ್ಯಮದ ಅಡಿಯಲ್ಲಿ ರೈತರು ಹೆಚ್ಚಿನ ಪೌಷ್ಟಿಕಾಂಶದ ಗುಣಮಟ್ಟದ ಸಂಸ್ಕರಿಸಿದ ಆಹಾರ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ನೀಡುತ್ತಿದೆ.

Portion Packs of 28/30gm – Nectar Fresh

ಛಾಯಾ ರವರು ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದು, ಭಾರತೀಯ ಆಹಾರ ಉದ್ಯಮದಲ್ಲಿ ತಮ್ಮ ತಂಡವನ್ನು ಮುನ್ನಡೆಸಲು ಹೆಜ್ಜೆ ಇಡುತ್ತಿದ್ದಾರೆ.
ನೆಕ್ಟರ್ ಫ್ರೆಶ್ ಉತ್ಪನ್ನಗಳು ಮುಂದಿನ ದಿನಗಳಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯೊಂದಿಗೆ ಅಂತಾರಾಷ್ಟ್ರೀಯ ಗುಣಮಟ್ಟವನ್ನು ಪೂರೈಕೆಯಾಗುವ ಹಂತದಲ್ಲಿದೆ.

ಸಾಧನೆ:

  • 2014ರಲ್ಲಿ ಸಿಎನ್ ಬಿಸಿ ಮಹಿಳಾ ಉದ್ಯಮಿ ಪ್ರಶಸ್ತಿ.
  • Implementing Technologies Acquired by R&D Labs’ ವಿಚಾರವಾಗಿ ಭಾರತೀಯ ವಿಜ್ಞಾನ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ್ದರು.
  • ಎಪಿಒ ಜಪಾನ್, ದಕ್ಷಿಣ ಏಷ್ಯಾದ ಮಹಿಳಾ ಅಭಿವೃದ್ಧಿ ವೇದಿಕೆ, ಹಾಗೂ ಅಫ್ಘಾನಿಸ್ತಾನದ ಪ್ರಾದೇಶಿಕ ಆರ್ಥಿಕ ಸಹಕಾರ ಸಮ್ಮೇಳನದ ಪ್ರಮುಖ ಪ್ರತಿಷ್ಠಿತ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿದ್ದರು.
  • ವಿಶ್ವ ಹಿಂದೂ ಕಾಂಗ್ರೆಸ್‌ನಲ್ಲಿ ‘ಸ್ಫೂರ್ತಿದಾಯಕ ಮಹಿಳೆಯರಿಗೆ’ ಅಧಿವೇಶನದ ಅಧ್ಯಕ್ಷತೆ ವಹಿಸುವ ಅವಕಾಶವೂ ಲಭಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!