ಇದು ಸುಳ್ಯದ ಮೂಲಕ ಕರ್ನಾಟಕದ ಭವಿಷ್ಯ ನಿರ್ಧರಿಸುವ ಚುನಾವಣೆ: ಜೆ.ಪಿ. ನಡ್ಡಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಈ ಬಾರಿಯ ಚುನಾವಣೆ ಕೇವಲ ರಾಜಕೀಯ ಪಕ್ಷಗಳ ಚುನಾವಣೆ ಅಲ್ಲ. ಇದು ಈ ಸುಳ್ಯದ ಆ ಮೂಲಕ ಇಡೀ ಕರ್ನಾಟಕದ ಭವಿಷ್ಯವನ್ನು ನಿರ್ಣಯಿಸುವ ಚುನಾವಣೆಯಾಗಿದೆ. ನರೇಂದ್ರ ಮೋದಿಯವರ ನೇತೃತ್ವದ ಸರಕಾರ ಬಂದ ಮೇಲೆ ಭಾರತದ ಹೆಸರು ಇಡೀ ಜಗತ್ತಿನಲ್ಲಿ ಪ್ರಜ್ವಲಿಸಿದೆ. ಭಾರತ ಇನ್ನಷ್ಟು ವಿಕಾಸವಾಗಬೇಕಾದರೆ ನೀವು ಸುಳ್ಯದ ಭಾಗೀರಥಿ ಅವರನ್ನು ಗೆಲ್ಲಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಹೇಳಿದರು.

ಅವರು ಭಾರತೀಯ ಜನತಾ ಪಕ್ಷದ ಸುಳ್ಯ ಕ್ಷೇತ್ರದ ಅಭ್ಯರ್ಥಿ ಭಾಗೀರಥಿ ಅವರ ಪರವಾಗಿ ಸುಳ್ಯಕ್ಕೆ ಆಗಮಿಸಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಸೇರಿದ ಸಾವಿರಾರು ಬಿಜೆಪಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು‌.
ನಮ್ಮದು ಕೇವಲ ಒಂದು ಡಬ್ಬಲ್ ಇಂಜಿನ್ ಮಾತ್ರವಲ್ಲ, ಪವರ್ ಫುಲ್ ಇಂಜಿನ್ ಸರಕಾರ. ರೈತರ, ಕೂಲಿ ಕಾರ್ಮಿಕರ, ಬಡವರ ಕಲ್ಯಾಣಕ್ಕಾಗಿ ನಮ್ಮ ಸರಕಾರ ಅನೇಕ ಯೋಜನೆಗಳನ್ನು ಜಾರಿ ತಂದಿದೆ. ಕರ್ನಾಟಕದಲ್ಲಿ 54ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ ನೀಡಿದ್ದೇವೆ. 56 ಲಕ್ಷ ಪಲಾನುಭವಿಗಳಿಗೆ ಆಯುಷ್ಮಾನ್ ಭಾರತ ಯೋಜನೆ ನೀಡಿದ್ದೇವೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಲ್ಲಿ ಅಸಂಖ್ಯಾತ ಬಡವರಿಗೆ ಆಹಾರ ಧಾನ್ಯ ನೀಡಿದ್ದೇವೆ. ಇಂತಹ ಅನೇಕ ಯೋಜನೆಗಳು ಮತ್ತೂ ಮುಂದುವರಿಯ ಬೇಕಾದರೆ ಕೇಂದ್ರ ಹಾಗೂ ರಾಜ್ಯದಲ್ಲಿ ಎರಡೂ ಕಡೆ ಬಿಜೆಪಿ ಸರಕಾರ ಇರಬೇಕಾದ ಅನಿವಾರ್ಯತೆ ಇದೆ ಎಂದವರು ಹೇಳಿದರು.

ನಾವು ಈ ದೇಶದಲ್ಲಿ ಧರ್ಮದ ಹೆಸರಲ್ಲಿ ಮೀಸಲಾತಿ ಕೊಡುವುದಿಲ್ಲ. ಬಡವರಿಗೆ ದೀನ ದಲಿತರಿಗೆ ಮೀಸಲಾತಿ ನೀಡುತ್ತೇವೆ. ಎಂದ ಅವರು ಪ್ರವೀಣ್ ನೆಟ್ಟಾರು ಅವರಂತಹ ನಿಷ್ಟಾವಂತ ಹಿಂದೂ ಕಾರ್ಯಕರ್ತನ ಕೊಲೆಗೆ ಕಾರಣವಾದ ಪಿ ಎಫ್ ಐ ಯನ್ನು ನಿಷೇಧಿಸಿದ್ದೇವೆ. ಆದರೆ ಕಾಂಗ್ರೆಸ್ ಪಿ ಎಫ್ ಐ ಮೇಲಿನ ನಿಷೇಧವನ್ನು ತೆರವು ಮಾಡುವುದಾಗಿ ಹೇಳುತ್ತಿದೆ. ಸಿದ್ದರಾಮಯ್ಯರಿಗೆ ಪಿಎಫ್ ಐ ಮೇಲೆ ಈ ಪ್ರೀತಿ ಸಹಾನುಭೂತಿ ಯಾಕೆ ಎಂದು ಪ್ರಶ್ನಿಸಿದರು.
ಈ ದೇಶ ಅಭಿವೃದ್ಧಿ ಆಗಬೇಕಾದರೆ ಭಾಗೀರಥಿಯಂತಹವರು ಗೆಲ್ಲಬೇಕು. ಮಹಿಳಾ ಶಕ್ತಿ ಗೆಲ್ಲಬೇಕು. ಮೇ. 10ರಂದು ನೀವೆಲ್ಲ ಒಂದಾಗಿ ಮಹಿಳಾ ಶಕ್ತಿಯನ್ನು ಗೆಲ್ಲಿಸಲು ಪಣತೊಡಬೇಕು ಎಂದವರು ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!