VIDEO | ಕಣ್ಣೀರಿಟ್ಟ ಟೀಂ ಇಂಡಿಯಾ ಆಟಗಾರರನ್ನು ಪ್ರಧಾನಿ ಮೋದಿ ಹುರಿದುಂಬಿಸಿದ್ದು ಹೀಗೆ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಕಪ್ ಫೈನಲ್ಸ್‌ನಲ್ಲಿ ಸೋತು ಬೇಸರದಲ್ಲಿದ್ದ ಟೀಂ ಇಂಡಿಯಾ ಆಟಗಾರರನ್ನು ಪ್ರಧಾನಿ ಮೋದಿ ಸಂತೈಸಿದ್ದಾರೆ.

ಪಂದ್ಯ ಮುಗಿದಂತೆಯೇ ಡ್ರೆಸ್ಸಿಂಗ್ ರೂಮ್‌ಗೆ ತೆರಳಿ ತಂಡದ ಆಟಗಾರರನ್ನು ಪ್ರಧಾನಿ ಮೋದಿ ಸಂತೈಸಿದ್ದಾರೆ, ಈ ವಿಡಿಯೋ ಇಂದು ವೈರಲ್ ಆಗಿದ್ದು, ಪ್ರಧಾನಿಯೆಂದರೆ ಹೀಗಿರಬೇಕು ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.

ಹತ್ತು ಪಂದ್ಯಗಳನ್ನು ಗೆದ್ದಿದ್ದೀರಿ, ದೇಶ ನಿಮ್ಮನ್ನೇ ನೋಡುತ್ತಿದೆ, ನಿಮ್ಮ ಮೇಲೆ ನಮಗೆ ಹೆಮ್ಮೆಯಿದೆ, ಆಟ ಎಂದಮೇಲೆ ಇದೆಲ್ಲಾ ಆಗುತ್ತಲೇ ಇರುತ್ತದೆ. ಒಮ್ಮೆ ನಕ್ಕುಬಿಡಿ ಎಂದು ಪ್ರಧಾನಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!