ಸಖತ್‌ ವೈರಲ್‌ ಆಗ್ತಿದೆ ಸರಕು-ಸಾಗಣೆ ಹಡಗು ಅಪಹರಣ ಮಾಡಿರುವ ವಿಡಿಯೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೌತಿ ಉಗ್ರರು ಸಿನಿಮೀಯ ರೀತಿಯಲ್ಲಿ ಸರಕು-ಸಾಗನೆ ಹಡಗನ್ನು ಅಪಹರಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಉಗ್ರರು ಹೆಲಿಕಾಪ್ಟರ್‌ನಿಂದ ಕೆಂಪು ಸಮುದ್ರದಲ್ಲಿ ಚಲಿಸುವ ಹಡಗಿನ ಮೇಲೆ ಇಳಿದು ‘ಅಲ್ಲಾ ಹು ಅಕ್ಬರ್’ ಎಂದು ಕೂಗುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

ಹಡಗಿನ ಕ್ಯಾಬಿನ್‌ಗೆ ತೆರಳಿ ಸಿಬ್ಬಂದಿಯನ್ನು ಶರಣಾಗುವಂತೆ ಕೇಳುತ್ತಾರೆ. ಹಡಗನ್ನು ಅಪಹರಿಸುವ ವೀಡಿಯೊವನ್ನು ಹೌತಿ ಟಿವಿ ಚಾನೆಲ್ ಅಲ್ ಮಶಿರಾದಲ್ಲಿ ಬಿಡುಗಡೆ ಮಾಡಲಾಗಿದೆ.

ಹೌತಿ ಉಗ್ರಗಾಮಿಗಳು ಅಪಹರಿಸಿದ ಗ್ಯಾಲಕ್ಸಿ ಲೀಡರ್ ಹಡಗು ಬ್ರಿಟಿಷ್ ಕಂಪನಿಯ ಹೆಸರಿನಲ್ಲಿದೆ ಮತ್ತು ಜಪಾನ್ ನಿರ್ವಹಣೆ ಮಾಡುತ್ತಿದೆ ಎಂದು ಇಸ್ರೇಲ್ ಹೇಳಿದೆ. ಉಪಗ್ರಹ ಟ್ರ್ಯಾಕಿಂಗ್ ಡೇಟಾವು ಹಡಗನ್ನು ಹೈಜಾಕ್ ಮಾಡಿದ ಸಮಯವನ್ನು ಬಹಿರಂಗಪಡಿಸಿತು. ಇದು ಸೌದಿ ಅರೇಬಿಯಾದ ಜೆಡ್ಡಾದ ನೈಋತ್ಯಕ್ಕೆ ಕೆಂಪು ಸಮುದ್ರದಲ್ಲಿ ನೌಕಾಯಾನ ಮಾಡುತ್ತಿತ್ತು. ಯೆಮನ್‌ನ ಹೊಡೆಡಾಹ್ ನಗರದಿಂದ 150 ಕಿಲೋಮೀಟರ್ ದೂರದಲ್ಲಿ ಅಪಹರಿಸಲಾಗಿದೆ.

ಆದರೆ ಸರಕು ಸಾಗಣೆ ಹಡಗು ಇಸ್ರೇಲಿ ಬಿಲಿಯನೇರ್‌ಗೆ ಸೇರಿದ್ದು ಎಂದು ಹೇಳಲಾಗುತ್ತಿದ್ದು, ಹೌತಿ ಉಗ್ರರ ಈ ಕ್ರಮವು ಇಸ್ರೇಲ್ ಮತ್ತು ಹಮಾಸ್‌ ನಡುವಿನ ಉದ್ವಗ್ನಿತೆಯನ್ನು ಹೆಚ್ಚಿಸಿದೆ. ಇದು ಆರಂಭವಷ್ಟೇ ಎಂದಿರುವ ಹೌತಿ ಭವಿಷ್ಯದಲ್ಲಿ ಇಂತಹ ಇನ್ನಷ್ಟು ದಾಳಿಗಳಿಗೆ ಸಿದ್ಧರಾಗಿ ಎಂದು ಇಸ್ರೇಲ್‌ಗೆ ಎಚ್ಚರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!