September 4, 2026
Friday, September 4, 2026
spot_img

ಆಗೆಲ್ಲಾ ಶಾಲೆಯಲ್ಲಿ ಕೊಡ್ತಿದ್ದ ಸಿಂಪಲ್‌ ಸ್ವೀಟ್‌ ಹೀಗೆ ತಯಾರಿಸಿ, ತಿಂದರೆ ಹಳೇ ಕಾಲಕ್ಕೊಮ್ಮೆ ಹೋಗಿ ಬರ್ತೀರಿ

ಆಗೆಲ್ಲಾ ಅಂಗನವಾಡಿಗಳಲ್ಲಿ ಶಾಲೆಗಳಲ್ಲಿ ಒಂದು ವಿಭಿನ್ನವಾದ ಸಿಹಿಯನ್ನು ಕೊಡ್ತಾ ಇದ್ರು, ಅದು ಬರ್ಫಿಯೋ, ಪೇಡವೋ, ಲಡ್ಡುವೋ ಒಂದೂ ಗೊತ್ತಾಗ್ತಾ ಇರಲಿಲ್ಲ. ಆದರೆ ರುಚಿ ಮಾತ್ರ ಅದ್ಭುತ. ಈಗಲೂ ಅದೇ ರುಚಿಯನ್ನು ರೀಕ್ರಿಯೇಟ್‌ ಮಾಡಬಹುದು. ಈ ಸಿಹಿ ತಿಂಡಿ ಆರೋಗ್ಯಕರವಾಗಿದ್ದು, ಮಕ್ಕಳು ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಯಾವ ರೆಸಿಪಿ ನೋಡಿ..

ಸಾಮಾಗ್ರಿಗಳು: ಉದ್ದಿನಬೇಳೆ, ಹೆಸರುಬೇಳೆ, ಬೆಲ್ಲ, ತುಪ್ಪ,ಹಾಲು, ಏಲಕ್ಕಿ ಪುಡಿ

ಮಾಡುವ ವಿಧಾನ

ಮೊದಲು ಒಂದು ಕಪ್‌ ಉದ್ದಿನಬೇಳೆ ಹಾಗೂ ಅರ್ಧ ಕಪ್‌ ಹೆಸರುಬೇಳೆಯನ್ನು ಹುರಿದುಕೊಳ್ಳಿ, ನಂತರ ತಣ್ಣಗಾಗಲು ಬಿಡಿ, ಆಮೇಲೆ ಮಿಕ್ಸಿಯಲ್ಲಿ ಪುಡಿ ಮಾಡಿ ಇಟ್ಟುಕೊಳ್ಳಿ

ನಂತರ ಪ್ಯಾನ್‌ಗೆ ಒಂದು ಕಪ್‌ ಬೆಲ್ಲ ಹಾಕಿ ನೀರು ಹಾಕಿ ಕುದಿಸಿ, ತುಪ್ಪ ಹಾಕಿ, ಈ ಮಿಶ್ರಣಕ್ಕೆ ತಣ್ಣಗಾದ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ.

ಆನಂತರ ಒಂದು ಕಪ್‌ ಹಾಲು, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ, ಇದು ಕೈಗೆ ಅಂಟದ ಕನ್ಸಿಸ್ಟೆನ್ಸಿಗೆ ಬಂದ ನಂತರ ಉಂಡೆಗಳನ್ನು ಮಾಡಿ ಇಟ್ಟುಕೊಳ್ಳಬಹುದು. ಮಕ್ಕಳು ನಿತ್ಯ ಶಾಲೆಯಿಂದ ಬಂದು ಸ್ನಾಕ್ಸ್‌ ಕೊಡಿ ಎಂದಾಗ ಇದನ್ನು ಕೊಡಬಹುದು. ಆರೋಗ್ಯಕ್ಕೂ ಇದು ಬೆಸ್ಟ್‌ ಚಾಯ್ಸ್‌

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !