October 17, 2026
Saturday, October 17, 2026
spot_img

HEALTH | ನೀವು ಹೆಲ್ತಿಯಾಗಿದ್ದೀರ ಅಂತ ಹೇಳೋದಕ್ಕೆ ದೇಹ ಈ ರೀತಿಯ ಸಿಗ್ನಲ್‌ ಕೊಡತ್ತಂತೆ!

ಆರೋಗ್ಯ ಹಾಳಾಗಿದೆ ಅನ್ನೋದಕ್ಕೂ ಆರೋಗ್ಯ ಚೆನ್ನಾಗಿದೆ ಅನ್ನೋದಕ್ಕೂ ನಿಮ್ಮ ದೇಹ ಸಿಗ್ನಲ್‌ಗಳನ್ನು ಕೊಡುತ್ತಲೇ ಬರುತ್ತದೆ. ಆದರೆ ನಿಮಗೆ ಈ ಬಗ್ಗೆ ತಿಳಿದಿರೋದಿಲ್ಲ. ನೀವು ಮಾಮೂಲಿ ಎಂದುಕೊಂಡ ಎಷ್ಟೊಂದು ವಿಷಯ ನೀವು ಹೆಲ್ತಿ ಎಂದು ಹೇಳುತ್ತಿವೆ..

ಬೆಳಗ್ಗೆ ಯಾವ ಅಲಾರಾಂ ಇಲ್ಲದೆ ಒಂದೇ ಸಮಯಕ್ಕೆ ಎದ್ದುಬಿಡುವುದು. ನಿಮ್ಮ ಮೈಂಡ್‌ ಹಾಗೂ ಬಾಡಿ ಸಿಂಕ್‌ನಲ್ಲಿದೆ ಎಂದರ್ಥ.

ಒಂದು ದಿನವೂ ಮಿಸ್‌ ಇಲ್ಲದಂತೆ ಮಲ ವಿಸರ್ಜನೆ ಮಾಡೋದು ನಿಮ್ಮ ಹೊಟ್ಟೆ ಹಾಗೂ ಓವರ್‌ಆಲ್‌ ಆರೋಗ್ಯದ ಸಂಕೇತ.

ಅಪರೂಪಕ್ಕೆ ಅನಾರೋಗ್ಯಕ್ಕೆ ತುತ್ತಾಗ್ತೀರಿ. ನಿಮ್ಮ ಇಮ್ಯೂನ್‌ ಸಿಸ್ಟಮ್‌ ಚೆನ್ನಾಗಿ ಕೆಲಸ ಮಾಡ್ತಿದ್ರೆ ಮಾತ್ರ ನೀವು ರೋಗಗಳಿಂದ ದೂರ ಇರೋಕೆ ಸಾಧ್ಯ.

ಚರ್ಮ ಆರೋಗ್ಯಕರವಾಗಿ ಕಾಣಿಸುತ್ತದೆ. ಮುಖದಲ್ಲಿ ಗುಳ್ಳೆ, ಡಲ್‌ನೆಸ್‌ ಇರೋದಿಲ್ಲ.

ನಿಮ್ಮ ಮೂಡ್‌ ನಾರ್ಮಲ್‌ ಆಗಿ ಇರುತ್ತದೆ. ಯಾವುದೇ ಎಮೋಷನ್ಸ್‌ ಅತಿಯಾಗಿ ಇರೋದಿಲ್ಲ. ಎಲ್ಲವೂ ಬ್ಯಾಲೆನ್ಸ್‌ ಆಗಿದೆ ಎಂದರ್ಥ.

ಮೆಟ್ಟಿಲು ಹತ್ತುವಾಗ ಉಸ್ಸಪ್ಪ ಎನ್ನದೇ ಪೂರ್ಣ ಮೆಟ್ಟಿಲುಗಳನ್ನು ಹತ್ತುತ್ತೀರಿ. ಮಸಲ್‌, ಮೂಳೆ, ಲಂಗ್ಸ್‌, ಹೃದಯ ಆರೋಗ್ಯವಾಗಿದೆ ಎಂದರ್ಥ.

ಮಲಗುವಾಗ ಹೊಟ್ಟೆಯಿಂದ ಸದ್ದು ಬರುತ್ತದೆ. ಇದು ಜೀರ್ಣಕ್ರಿಯೆ ಚೆನ್ನಾಗಿದೆ ಎಂದು ಹೇಳುತ್ತದೆ. ಬೆಳಗ್ಗೆ ಹೊಟ್ಟೆ ಹಸಿವಾಗೋದು ಕೂಡ ಆರೋಗ್ಯದ ಲಕ್ಷಣ.

ಇದೆಲ್ಲವೂ ಇಂಟರ್ನೆಟ್‌ ಆಧಾರಿತ ಮಾಹಿತಿಯಾಗಿದೆ. ಆರೋಗ್ಯದಲ್ಲಿ ಸಣ್ಣ ಏರುಪೇರು ಕಂಡುಬಂದರೂ ವೈದ್ಯರನ್ನು ಭೇಟಿ ಮಾಡಿ

Must Read