ಇದು ಭಾರತ. ನಗ್ನತೆಯ ಪ್ರಸಾರ ನಿಲ್ಲಬೇಕು: ಒಟಿಟಿಯ ಸೆನ್ಸಾರ್ ಇಲ್ಲದ ಕಾಂಟೆಂಟ್​​ಗಳಿಗೆ ಸಲ್ಲು ಗರಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರು ವೃತ್ತಿ ಜೀವನದಲ್ಲಿ ಹೇಗೆ ಇರುತ್ತಾರೋ ಹಾಗೆಯೇ ಸಿನಿ ಕ್ಷೇತ್ರದಲ್ಲೂ ಇದ್ದಾರೆ.

ತೆರೆಮೇಲೆ ಲಿಪ್ ಲಾಕ್ ಮಾಡುವುದಿಲ್ಲ ಸಿನಿಮಾಗಳಲ್ಲಿ ಅಸಭ್ಯ ದೃಶ್ಯಗಳಿಗೆ ಜಾಗ ಇರೋದಿಲ್ಲ. ಎಷ್ಟೇ ಕೋಟಿ ರೂಪಾಯಿ ಕೊಡುತ್ತೇನೆ ಎಂದರೂ ಸಲ್ಲು ಈ ನಿಯಮ ಮೀರೋದಿಲ್ಲ.

ಇದೀಗ ಸಲ್ಮಾನ್ ಖಾನ್ ಒಟಿಟಿ ಬಗ್ಗೆ ಮಾತನಾಡಿದ್ದಾರೆ. ಒಟಿಟಿಯಲ್ಲಿ ಪ್ರಸಾರ ಆಗುವ ಕಾಂಟೆಂಟ್​​ಗಳಿಗೆ ಯಾವುದೇ ಸೆನ್ಸಾರ್ ಇಲ್ಲದ ಕಾರಣ ಅಶ್ಲೀಲ ದೃಶ್ಯಗಳು ಹೇರಳವಾಗಿ ಸಿಗುತ್ತಿವೆ. ಇದನ್ನು ಸಲ್ಮಾನ್ ಖಾನ್ ಖಂಡಿಸಿದ್ದಾರೆ. ‘ಇದು ಭಾರತ. ನಗ್ನತೆಯ ಪ್ರಸಾರ ನಿಲ್ಲಬೇಕು’ ಎಂದಿದ್ದಾರೆ.

ಒಟಿಟಿಯ ಒಳಿತು ಹಾಗೂ ಕೆಡಕುಗಳ ಬಗ್ಗೆ ಮಾತನಾಡಿದ ಸಲ್ಮಾನ್ ಖಾನ್, ‘ಒಟಿಟಿಗೆ ಸೆನ್ಸಾರ್​ಶಿಪ್ ಬೇಕು. ನಗ್ನತೆ, ಕೆಟ್ಟ ಪದಗಳ ಬಳಕೆ ನಿಲ್ಲಬೇಕು. ಸಣ್ಣ ಮಕ್ಕಳು ಕೂಡ ಮೊಬೈಲ್​ನಲ್ಲಿ ಈ ರೀತಿಯ ಕಾಂಟೆಂಟ್​​ನ ನೋಡುವ ಸಾಧ್ಯತೆ ಇರುತ್ತದೆ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ್ದನ್ನು ನೋಡುತ್ತೇನೆ ಎಂದು ನಿಮ್ಮ ಮಗಳು ಮೊಬೈಲ್​ ತೆಗೆದುಕೊಂಡು ಈ ರೀತಿಯದ್ದನ್ನು ನೋಡಿದರೆ ಅದನ್ನು ನೀವು ಇಷ್ಟಪಡುತ್ತೀರಾ? ಒಟಿಟಿಗೆ ಸೆನ್ಸಾರ್​ಶಿಪ್ ತಂದರೆ ವೀಕ್ಷಕರ ಸಂಖ್ಯೆ ಹೆಚ್ಚಲಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಕಿನಿ, ಕಿಸ್ಸಿಂಗ್ ದೃಶ್ಯಗಳ ಬಗ್ಗೆಯೂ ಮಾತನಾಡಿದ ಅವರು, ‘ನೀವು ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸುತ್ತೀರಿ. ದೇಹವನ್ನು ಎಕ್ಸ್​ಪೋಸ್ ಮಾಡುತ್ತೀರಿ. ಮನೆಗೆ ಹೋದಾಗ ನಿಮ್ಮ ಮನೆಯ ವಾಚ್​ಮನ್ ಕೂಡ ಅದನ್ನೇ ವೀಕ್ಷಿಸುತ್ತಿರುತ್ತಾನೆ. ಭದ್ರತೆ ದೃಷ್ಟಿಯಿಂದ ಇದು ಸರಿಯಲ್ಲ. ನೀವು ಯಾವಾಗಾಲೂ ನಿಮ್ಮ ಗಡಿ ದಾಟಬಾರದು. ನಾವು ಇರೋದು ಭಾರತದಲ್ಲಿ’ ಎಂದು ಸಲ್ಲು ನೆನಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!