ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 15 ಗ್ಯಾರಂಟಿಗಳನ್ನೊಳಗೊಂಡ ಎಎಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಯುವಕರಿಗೆ ಉದ್ಯೋಗ, ಮಹಿಳೆಯರಿಗೆ ಮಹಿಳಾ ಸಮ್ಮಾನ್ ಯೋಜನೆ, 24 ಗಂಟೆ ಉಚಿತ ನೀರು, ಉಚಿತ ವಿದ್ಯುತ್, ದಲಿತ ವಿದ್ಯಾರ್ಥಿಗಳಿಗಾಗಿ ಅಂಬೇಡ್ಕರ್ ಸ್ಕಾಲರ್ ಶಿಪ್, ಯಮುನಾ ನದಿ ಶುದ್ಧೀಕರಣ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತರುವುದಾಗಿ ʻಕೇಜ್ರವಾಲ್ ಕಿ ಗ್ಯಾರಂಟಿʼ (Kejriwal Ki Guarantee) ಹೆಸರಿನ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.
ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಮತ್ತು ಮೆಟ್ರೋ ಪ್ರಯಾಣ ದರದಲ್ಲಿ ಶೇ.50ರಷ್ಟು ರಿಯಾಯಿತಿ ನೀಡುವುದಾಗಿಯೂ ಭರವಸೆ ನೀಡಿದ ಕೇಜ್ರಿವಾಲ್ ಇದು ಮೋದಿ ಅವರ ʻನಕಲಿ ಗ್ಯಾರಂಟಿʼ ಅಲ್ಲ ʻಕೇಜ್ರಿವಾಲ್ ಕೀ ಗ್ಯಾರಂಟಿʼ ಅಂತ ಹೇಳಿದ್ದಾರೆ.
ಎಎಪಿಯ 15 ಗ್ಯಾರಂಟಿಗಳು ಯಾವುವು?
* ಉದ್ಯೋಗದ ಖಾತ್ರಿ
* ಮಹಿಳಾ ಗೌರವ ಯೋಜನೆ – ಪ್ರತಿ ಮಹಿಳೆಗೆ ತಿಂಗಳಿಗೆ 2,100 ರೂ.
* ಸಂಜೀವನಿ ಯೋಜನೆ – 60 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ
* ತಪ್ಪಾಗಿ ಬಂದ ನೀರಿನ ಬಿಲ್ ಮನ್ನಾ
* 24 ಗಂಟೆ ನೀರು ಪೂರೈಕೆ
* ಯುರೋಪ್ ಮಾದರಿಯಲ್ಲೇ ರಸ್ತೆ ಅಭಿವೃದ್ಧಿ
* ಯಮುನಾ ನದಿ ಶುದ್ಧೀಕರಣ
* ಡಾ.ಅಂಬೇಡ್ಕರ್ ವಿದ್ಯಾರ್ಥಿವೇತನ ಯೋಜನೆ
* ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ, ದೆಹಲಿ ಮೆಟ್ರೋದಲ್ಲಿ 50% ರಿಯಾಯಿತಿ
* ಅರ್ಚಕರಿಗೆ 18,000 ಸಾವಿರ ರೂ.
* ಬಾಡಿಗೆದಾರರಿಗೆ ಉಚಿತ ವಿದ್ಯುತ್ ಮತ್ತು ನೀರು
* ಒಳಚರಂಡಿ ಶುದ್ಧೀಕರಣ
* ಪಡಿತರ ಚೀಟಿ
* ಆಟೋ, ಟ್ಯಾಕ್ಸಿ ಮತ್ತು ಇ-ರಿಕ್ಷಾ ಚಾಲಕರ ಮಗಳ ಮದುವೆಗೆ 1 ಲಕ್ಷ ರೂ., ಮಕ್ಕಳಿಗೆ ಉಚಿತ ತರಬೇತಿ, ಜೀವ ವಿಮೆ
* RWA ಗಳಿಗೆ (ವಸತಿ ಕಲ್ಯಾಣ ಸಂಘಗಳು) ಖಾಸಗಿ ಭದ್ರತಾ ಸಿಬ್ಬಂದಿ ಒದಗಿಸಲಾಗುವುದು.