ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು (Bharat Jodo Nyay Yatra) ಮಣಿಪುರ (Manipur) ಮುಖ್ಯಮಂತ್ರಿ ಬಿರೇನ್ ಸಿಂಗ್ (Biren Singh) ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಮಣಿಪುರಕ್ಕೆ ಬಂದಿದ್ದು ಪ್ರಸ್ತುತ ಪರಿಸ್ಥಿತಿ ಸುಧಾರಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಇಂಫಾಲ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಂಗ್, “ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಇದು ರ್ಯಾಲಿ ನಡೆಸುವ ಮೂಲಕ ರಾಜಕೀಯ ಮಾಡುವ ಸಮಯವೇ? ಜೀವಗಳು ಮತ್ತು ಆಸ್ತಿಗಳನ್ನು ರಕ್ಷಿಸುವ ಮತ್ತು ಸಾಂತ್ವನ ನೀಡುವ ಸಮಯ ಇದು.ಪರಿಸ್ಥಿತಿ ಸುಧಾರಿಸುತ್ತಿದೆ. ಆದರೆ ರಾಹುಲ್ ಗಾಂಧಿ ಇದನ್ನೆಲ್ಲ ಕೆಡಿಸಲು ಬಂದಿದ್ದಾರೆಯೇ ಎಂಬ ಅನುಮಾನ ನಮಗಿದೆ. ಈ ಬಾರಿ ಮಣಿಪುರ ಅಲರ್ಟ್ ಆಗಿದೆ. ಅವರು ಬಂದರೆ, ಅಂತದ್ದೇನೂ ಅನಾಹುತ ಆಗದಂತೆ ಎಚ್ಚರವಹಿಸಬೇಕು ಎಂದು ಸಿಎಂ ಹೇಳಿದರು
ಕಾಂಗ್ರೆಸ್ ನಾಯಕ ‘ಭಾರತ್ ತೋಡೋ’ (ಬ್ರೇಕ್ ಇಂಡಿಯಾ) ಯಾತ್ರೆ ಕೈಗೊಂಡಿದ್ದಾರೆ. ಅದು ಭಾರತ್ ಜೋಡೋ ಯಾತ್ರೆ ಅಲ್ಲ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರ ಹಿರಿಯ ನಾಯಕರು ಭಾನುವಾರ ಮಣಿಪುರದ ತೌಬಲ್‌ನಿಂದ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಚಾಲನೆ ನೀಡಿದರು.